ವೃದ್ಧ ಜೋಡಿಗಳ ಷಷ್ಠಿಪೂರ್ವ ನೆರವೇರಿಸಿ ಸಂಭ್ರಮಿಸಿದ ಮೊಮ್ಮಕ್ಕಳು

ದೊಡ್ಡಬಳ್ಳಾಪುರ: ಮೊಮ್ಮಕ್ಕಳೇ ಮುಂದೆ ನಿಂತು ಅಜ್ಜ-ಅಜ್ಜಿಗೆ ಸಾಮೂಹಿಕ 60ನೇ ವರ್ಷದ ವಿವಾಹ ನೆರವೇರಿಸಿ ಸಂಭ್ರಮಿಸಿದ್ದಾರೆ. ನಗರದ ಧೀರಜ್ ಮುನಿರಾಜು ಎಂಬವರು ನಗರದಲ್ಲಿ ಸಾವಿರಾರು ಜೋಡಿಗಳಿಗಾಗಿ ಷಷ್ಠಿಪೂರ್ವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಷಷ್ಠಿಪೂರ್ತಿ ಮಾಡಲು ತಮಿಳುನಾಡಿನ ತಂಜಾವೂರಿಗೆ ಹೋಗಲು ಆಗದ ಕಾರಣ ನಗರದ ದೇವಾಲಯದಲ್ಲಿ ತಂಜಾವೂರಿನ ಶಿವಪಾರ್ವತಿ ಸೆಟ್ ಅನ್ನು ಹಾಕಿಸಿ ಅದರಲ್ಲಿ ಷಷ್ಠಿಪೂರ್ತಿ ಕಾರ್ಯವನ್ನು ನಡೆಸಿದ್ದರು.