ಕುರುಕ್ಷೇತ್ರದಲ್ಲಿ ಭಯಾನಕ ಕೃತ್ಯ; ಕೈಗಳನ್ನು ಕತ್ತರಿಸಿ ಕೊಂಡೊಯ್ದ ದುಷ್ಕರ್ಮಿಗಳು!

ಹರಿಯಾಣ: ವ್ಯಕ್ತಿಯೊಬ್ಬನ ಕೈಯನ್ನು ದುಷ್ಕರ್ಮಿಗಳು ಕತ್ತರಿಸಿ, ಕೊಂಡೊಯ್ದಿರುವ ಘಟನೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದಿದೆ. ಘಟನೆಯ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ. ಜುಗ್ನು(30) ಎಂಬ ವ್ಯಕ್ತಿ ಕುರುಕ್ಷೇತ್ರ ಹವೇಲಿಯ ಹೊರಗೆ ಕುಳಿತಿದ್ದಾಗ 10-12 ಮಂದಿ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ನಂತರ, ಆತನ ಕೈಯನ್ನು ಕತ್ತರಿಸಿ ತೆಗೆದುಕೊಂಡು ಹೋಗಿದ್ದಾರೆ. ರಕ್ತದ ಮಡುವುನಲ್ಲಿ ಬಿದ್ದಿದ್ದ ಜುಗ್ನುವನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.