ಮಾರೊಕ್ಕೂ ವಿರುದ್ಧ ಪಂದ್ಯ ಸೋತ ಬೆಲ್ಜಿಯಂ; ಅಭಿಮಾನಿಗಳಿಂದ ಹಿಂಸಾಚಾರ

ಮಾರೊಕ್ಕೂ ವಿರುದ್ಧ ಪಂದ್ಯ ಸೋತ ಬೆಲ್ಜಿಯಂ; ಅಭಿಮಾನಿಗಳಿಂದ ಹಿಂಸಾಚಾರ

ಫಿಫಾ ವಿಶ್ವಕಪ್‍ನಲ್ಲಿ ಮಾರೊಕ್ಕೂ ವಿರುದ್ಧ ಬೆಲ್ಜಿಯಂ ಸೋತ ಬೆನ್ನಲ್ಲೇ ಬೆಲ್ಜಿಯನ್‍ನಲ್ಲಿ ಅಭಿಮಾನಿಗಳು ರೊಚ್ಚಿಗೆದ್ದು ಹಿಂಸಾಚಾರಕ್ಕಿಳಿದಿದ್ದಾರೆ. ಬೆಲ್ಜಿಯಂ ವಿರುದ್ಧ ಮಾರೊಕ್ಕೂ 2-0 ಅಂತರದಲ್ಲಿ ಗೆದ್ದ ಬೆನ್ನಲ್ಲೇ ಬೆಲ್ಜಿಯನ್‍ನಲ್ಲಿ ಫುಟ್‍ಬಾಲ್ ಅಭಿಮಾನಿಗಳು ರಸ್ತೆಯಲ್ಲಿದ್ದ ಕಾರ್, ಬೈಕ್‍ಗಳಿಗೆ ಬೆಂಕಿ ಇಟ್ಟು ಮಾರೊಕ್ಕೂ ದೇಶದ ಧ್ವಜವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬೆಲ್ಜಿಯಂ ಪೊಲೀಸರು 12ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.