ಆರ್.ಟಿ.ಓ ದಲ್ಲಿ ಇನ್ಮುಂದೆ ಚಾಲನಾ ಪರೀಕ್ಷೆ ಇಲ್ಲದೇ ಸಿಗುತ್ತೆ ಡ್ರೈವಿಂಗ್ ಲೈಸೆನ್ಸ್

ಆರ್.ಟಿ.ಓ ದಲ್ಲಿ ಇನ್ಮುಂದೆ ಚಾಲನಾ ಪರೀಕ್ಷೆ ಇಲ್ಲದೇ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದಾಗಿದೆ. ಇದಕ್ಕಾಗಿ ನೀವು ರಸ್ತೆ ಸಾರಿಗೆ ಸಚಿವಾಲಯದಿಂದ ಮಾನ್ಯತೆ ಪಡೆದ ಚಾಲನಾ ಪರೀಕ್ಷಾ ಕೇಂದ್ರದಿಂದ ತರಬೇತಿ ಪಡೆಯಬೇಕಾಗುತ್ತದೆ.
ಅಲ್ಲಿ ನೀಡುವ ಪ್ರಮಾಣಪತ್ರವನ್ನು ಡಿಎಲ್ ಪಡೆಯುವಾಗ ನೀಡಿದರೆ ಸಾಕು, ಡ್ರೈವಿಂಗ್ ಟೆಸ್ಟ್ ಮಾಡದೇ ಲೈಸನ್ಸ್ ನೀಡಲಾಗುತ್ತೆ. ಮಾನ್ಯತೆ ಪಡೆದ ತರಬೇತಿ ಕೇಂದ್ರಗಳು ಬರುವ ಜುಲೈ 1ರಿಂದ ಆರಂಭವಾಗಲಿವೆ. ಈ ಬಗ್ಗೆ ಸಾರಿಗೆ ಸಚಿವಾಲಯ ಆದೇಶ ಹೊರಡಿಸಿದೆ.