ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ : ಜನರಲ್ಲಿ ಆತಂಕ

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ : ಜನರಲ್ಲಿ ಆತಂಕ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪ ಅನುಭವವಾಗಿದೆ. ಜಿಲ್ಲೆಯ ತಿಕೋಟಾ ಪಟ್ಟಣದ ಸುತ್ತಮುತ್ತ ಭೂಮಿ ಕಂಪಿಸಿದೆ. ಇದರಿಂದರಿಂದ ಜನರಿಗೆ ಆತಂಕ ಶುರುವಾಗಿದೆ.ಭೂಕಂಪನ ಜೊತೆಗೆ ಭಾರಿ ಸ್ಪೋಟದ ಸದ್ದಿಗೆ ಜನ ಬೆಚ್ಚಿ ಬಿದ್ದು, ಮನೆಯಿಂದ ಹೊರ ಬಂದಿದ್ದಾರೆ.ತಿಕೋಟಾ ಸುತ್ತ ಮುತ್ತ ಮೂರು ಬಾರಿ ಭೂಕಂಪನ‌ ಅನುಭವವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.ಜನರು ಭಯಭೀತರಾಗಿ ಮನೆಯಿಂದ ಹೊರಗೆ ಬಂದು ರಾತ್ರಿ ಕಳೆದಿರುವ ಘಟನೆ ನಡೆದಿದೆ.

ತಿಕೋಟಾ ಪಟ್ಟಣ ಸೇರಿ ಸುತ್ತಮುತ್ತಲಿನ ಪ್ರದೇಶಗಳಾದ ಕಳ್ಳಕವಟಗಿ, ಘೋಣ ಸಗಿ, ಬಾಬಾನಗರ, ಟಕ್ಕಳಕಿ, ಹುಬನೂರ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ ಗ್ರಾಮಗಳಲ್ಲಿ ಭೂಕಂಪ ಅನುಭವವಾಗಿದೆ. ರಾತ್ರಿ 10.32 ರ ಸುಮಾರಿಗೆ ಭಯಾನಕ ಕಂಪನದ ಅನುಭವ ಜನರನ್ನು‌ಮನೆಯಿಂದ ಓಡುವಂತೆ ಮಾಡಿತ್ತು.