ಬೆಂಗಳೂರಿಗೂ ಕಾಲಿಟ್ಟ ಮಕ್ಕಳ ಕಳ್ಳರ ವದಂತಿ..!; ಸುಳ್ಳು ಸುದ್ದಿಗೆ ಬಿತ್ತು ಅಮಯಾಕನ ಹೆಣ!
ಬೆಂಗಳೂರು : ಈಗಾಗಲೇ ಕೆಲ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಮಕ್ಕಳ ಕಳ್ಳರ ವದಂತಿ ಬೆಂಗಳೂರಿಗೆ ಆವರಿಸಿದೆ. ನಗರದಲ್ಲಿ ಮಕ್ಕಳ ಕಳ್ಳರು ಎಂದು ಭಾವಿಸಿ ಸಂಜಯ್ ಎಂಬಾತನ ಮೇಲೆ ಜನರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಸುಳ್ಳು ಸುದ್ದಿಗೆ ಅಮಯಾಕನ ಹೆಣಬಿದ್ದಿದೆ. ಜನರು ಥಳಿಸಿದ ಬಳಿಕ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ರಾಮೂರ್ತಿ ನಗರ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆತ ಮಕ್ಕಳು ಕಳ್ಳ ಆಗಿರಲಿಲ್ಲ. ಅವನು ರಾತ್ರಿ ವೇಳೆ ಕುಡಿದು ಓಡಾಡುತ್ತಿದ್ದ ಎಂದು ಮಾಹಿತಿ ತಿಳಿದುಬಂದಿದೆ. ಸಾರ್ವಜನಿಕರು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಕೊಲೆ ಎಂದು ಪ್ರಕರಣ ದಾಖಲು ಮಾಡಿದ್ದರು. ಕೊಲೆ ಕೇಸ್ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕೆ ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.