ರಾಜ್ಯದ ಜನತೆಗೆ ಗುಡ್ ನ್ಯೂಸ್: ಇನ್ಮುಂದೆ ಏಳು ದಿನಗಳೊಳಗೇ ಭೂ ಪರಿವರ್ತನೆ ದಾಖಲೆ ಲಭ್ಯ
ಬೆಂಗಳೂರು: ರಾಜ್ಯದ ಜನತೆಗೆ ಅನುಕೂಲವಾಗುವಂತೆ ಭೂ ಪರಿವರ್ತನೆಯ ಬಳಿಕ, ಆ ದಾಖಲೆಗಳು ಸಂಬಂಧ ಪಟ್ಟವರಿಗೆ ಏಳು ದಿನಗಳ ಒಳಗಾಗಿ ಲಭ್ಯವಾಗುವಂತೆ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಳ್ಳುವಂತ ಭರವಸೆಯನ್ನು ನೀಡಲಾಗಿದೆ.
ಈ ಕುರಿತಂತೆ ಸ್ಟೇಟ್ ಕಾನ್ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದಂತ ಕಂದಾಯ ಸಚಿವ ಆರ್ ಅಶೋಕ್ ಅವರು, ದಶಕಗಳಿಂದ ಭೂ ಪರಿವರ್ತನೆ ಪ್ರಕ್ರಿಯೆಯು ಸಮಸ್ಯೆಯ ಗೂಡಾಗಿದೆ.
ಭೂ ಪರಿವರ್ತನೆ ಮತ್ತಷ್ಟು ಸರಳೀಕರಣಗೊಳಿಸುವ ನಿಟ್ಟಿನಲ್ಲಿ, ಇದರ ಅವಧಿಯನ್ನು 7 ದಿನಕ್ಕೆ ಇಳಿಸಲಾಗಿದೆ. ಒಂದು ವೇಳೆ ಈ ಸಮಯದೊಳಗೆ ಡಿಸಿಯವರು ಪ್ರಮಾಣ ಪತ್ರವನ್ನು ನೀಡಿದ್ದಲ್ಲಿ ಅರ್ಜಿದಾರನಿಗೆ ತಾನು ಸಲ್ಲಿಸಿರುವ ಭೂ ಪರಿವರ್ತನೆ ಸ್ವಯಂ ಜನರೇಟ್ ಆಗಲಿದೆ ಎಂದು ಹೇಳಿದರು.
ಈ ಹಿಂದೆ ನೊಂದಣಿಗಾಗಿ ಹಲವು ದಾಖಲೆಗಳನ್ನು ಕೊಂಡೊಯ್ಯಬೇಕಿತ್ತು. ಆದ್ರೇ ಇದನ್ನು ಸರಳೀಕರಣ ಗೊಳಿಸಲಾಗಿದೆ. ಈಗ ಕಾವೇರಿ 2.0 ಜಾರಿಗೊಳಿಸಿದ ಬಳಿಕ ಸಬ್ ರಿಜಿಸ್ಟರ್ ಕಚೇರಿಯಲ್ಲೇ ಹಲವು ದಾಖಲೆಗಳು ಲಭ್ಯವಾಗೋ ಕಾರಣ, ಕೆಲ ದಾಖಲೆಗಳನ್ನು ಮಾತ್ರವೇ ಕೊಂಡೊಯ್ಯಲಾಗುತ್ತಿದೆ ಎಂದು ತಿಳಿಸಿದರು.