ಛೇ..ಇದೆಂತಹ ಘೋರ ಕೃತ್ಯ : ಮುದ್ದಾದ ಮಗಳನ್ನೇ ಕೊಂದ ಮಹಾತಾಯಿ.

ಛೇ..ಇದೆಂತಹ ಘೋರ ಕೃತ್ಯ : ಮುದ್ದಾದ ಮಗಳನ್ನೇ ಕೊಂದ ಮಹಾತಾಯಿ.

ಬೆಂಗಳೂರು : ಬೆಂಗಳೂರಿನಲ್ಲಿ ಪಾಪಿ ತಾಯಿಯೊಬ್ಬಳು ತನ್ನ ಮಗಳನ್ನೇ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

10 ವರ್ಷದ ವಿಕಲಚೇತನ ಮಗಳನ್ನು ತಾಯಿ ಸುಮಾ ಎಂಬಾಕೆ ಕೊಂದಿದ್ದಾಳೆ, ನಂತರ ಆಕೆ ಕೂಡ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ.

ಆದರೆ ದುರಾದೃಷ್ಟ ಅಂದರೆ ತಾಯಿ ಬದುಕಿದ್ದು, ಏನೂ ಅರಿಯದ ಕಂದಮ್ಮ ಮಾತ್ರ ಜೀವ ಬಿಟ್ಟಿದೆ.

ಮಗಳು ವಿಕಲಚೇತನೆ ಎಂದು ಬೇಸತ್ತ ತಾಯಿ ಸುಮಾ ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.