ವಿಚಾರಣೆಗೆ ಕಡ್ಡಾಯ ಹಾಜರಾಗುವಂತೆ ಸಾಹಿತಿ ಭಗವಾನ್‌ಗೆ ಷರತ್ತು ಬದ್ಧ ಜಾಮೀನು

ವಿಚಾರಣೆಗೆ ಕಡ್ಡಾಯ ಹಾಜರಾಗುವಂತೆ ಸಾಹಿತಿ ಭಗವಾನ್‌ಗೆ ಷರತ್ತು ಬದ್ಧ ಜಾಮೀನು

ರಾಮ ಮಂದಿರ ಏಕೆ ಬೇಡ? ಕೃತಿ ವಿವಾದದ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದ ಸಾಹಿತಿ ಕೆ.ಎಸ್‌. ಭಗವಾನ್‌ ಮಂಗಳವಾರ ಸಾಗರದ ಜೆಎಂಎಫ್‌ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿ, ಮುಂದಿನ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದ್ದಾರೆ. ಜತೆಗೆ ಭಗವಾನ್‌ 1 ಲಕ್ಷ ರೂ. ವೈಯಕ್ತಿಕ ಬಾಂಡ್‌ ಕೂಡ ನೀಡಿದ್ದಾರೆ.