ನಾನು ಚಿತ್ರರಂಗದಿಂದ ನಿವೃತ್ತಿ ತೆಗೆದುಕೊಳ್ಳುವ ದಿನವಿದು ಎಂದ ದರ್ಶನ್

ನಾನು ಚಿತ್ರರಂಗದಿಂದ ನಿವೃತ್ತಿ ತೆಗೆದುಕೊಳ್ಳುವ ದಿನವಿದು ಎಂದ ದರ್ಶನ್

ರ್ಶನ್ ಅಭಿನಯದ ಯಾವ ಚಿತ್ರಗಳೂ ಸಹ ಈ ವರ್ಷ ಬಿಡುಗಡೆಗೊಂಡಿಲ್ಲ. ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ರಿಲೀಸ್ ಆಗಿದ್ದ ರಾಬರ್ಟ್ ಚಿತ್ರದ ಬಳಿಕ ದರ್ಶನ್ ಅಭಿನಯದ ಯಾವೊಂದು ಚಿತ್ರವೂ ತೆರೆಕಂಡಿಲ್ಲ. ಇನ್ನು ಈ ವರ್ಷದ ನವೆಂಬರ್ ತಿಂಗಳ ಒಂದನೇ ತಾರೀಖಿನಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದರ್ಶನ್ ಅಭಿನಯದ ಕ್ರಾಂತಿ ಚಿತ್ರ ತೆರೆಕಾಣಲಿದೆ ಎನ್ನಲಾಗಿತ್ತಾದರೂ ಚಿತ್ರೀಕರಣ ವಿಳಂಬವಾದ ಕಾರಣ ಮುಂದಿನ ಜನವರಿ ತಿಂಗಳ ಗಣರಾಜ್ಯೋತ್ಸವದಂದು ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಹೀಗಾಗಿ ನಟ ದರ್ಶನ್ ಸಾಲು ಸಾಲು ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದು ಬೆಂಗಳೂರು ಟೈಮ್ಸ್ ನಡೆಸಿದ ಸಂದರ್ಶನದಲ್ಲಿಯೂ ಭಾಗವಹಿಸಿದ್ದಾರೆ. ಇನ್ನು ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಸಲುವಾಗಿ ಈ ವಿಶೇಷ ಸಂದರ್ಶನವನ್ನು ನಡೆಸಲಾಗಿದ್ದು, ಹಲವಾರು ಆಸಕ್ತಿಕರ ಹಾಗೂ ಕುತೂಹಲಕಾರಿ ಪ್ರಶ್ನೆಗಳಿಗೆ ನಟ ದರ್ಶನ್ ಮುಕ್ತವಾಗಿ ಉತ್ತರಿಸಿದ್ದಾರೆ.

ಚಿತ್ರಗಳ ಯಶಸ್ಸನ್ನು ಹೇಗೆ ನಿಭಾಯಿಸುತ್ತೀರ, ಚಿತ್ರಗಳ ಆಯ್ಕೆಯನ್ನು ಹೇಗೆ ಮಾಡುತ್ತೀರ, ಮೊದಲ ಚಿತ್ರ ಮಾಡುವಾಗ ನಿಮ್ಮ ನಿರೀಕ್ಷೆ ಏನಿತ್ತು ಹಾಗೂ ಅಂತಿಮವಾಗಿ ಚಿತ್ರರಂಗದಿಂದ ಯಾವಾಗ ನಿವೃತ್ತಿ ಹೊಂದಿದ್ದೀರ ಎಂಬೆಲ್ಲಾ ಪ್ರಶ್ನೆಗಳಿಗೆ ದರ್ಶನ್ ಈ ಕೆಳಕಂಡಂತೆ ಉತ್ತರಿಸಿದ್ದಾರೆ.