ಕಿವಿಗೆ ಹೂ ಇಟ್ಟುಕೊಂಡಿದ್ದು ಕಾಂಗ್ರೆಸ್ಸಿಗರ ದಿವಾಳಿತನ ತೋರಿಸುತ್ತೆ: ಸುಧಾಕರ್‌ ವಾಗ್ದಾಳಿ

ಕಿವಿಗೆ ಹೂ ಇಟ್ಟುಕೊಂಡಿದ್ದು ಕಾಂಗ್ರೆಸ್ಸಿಗರ ದಿವಾಳಿತನ ತೋರಿಸುತ್ತೆ: ಸುಧಾಕರ್‌ ವಾಗ್ದಾಳಿ

ಚಿಕ್ಕಬಳ್ಳಾಪುರ: ನಿನ್ನೆ ರಾಜ್ಯ ಬಜೆಟ್‌ಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ್ದಾರೆ. ಈ ವೇಳೆ ಕಾಂಗ್ರೆಸ್‌ ನವರು ಕಿವಿ ಹೂ ಇಟ್ಟುಕೊಂಡು ಬಂದು ಸದನದಲ್ಲಿ ಕೂಳಿತುಕೊಂಡಿದ್ದರು. ಈ ವಿಚಾರವಾಗಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಜೆಟ್‌ ಮಂಡನೆಗೂ ಮುನ್ನ ಅಪಹಾಸ್ಯ ಮಾಡಿದ್ದು ಖಂಡನೀಯವಾಗಿದೆ. ಸಿಎಂ ಆಗಿದ್ದ ಸಿದ್ದರಾಮಯ್ಯ ವ್ಯವಸ್ಥೆ ಮೇಲೆ ನಂಬಿಕೆ ಇಡಬೇಕಿತ್ತು. ಬಜೆಟ್‌ ಮಂಡನೆಯಾದ ಬಳಿಕ ಅವರು ಪ್ರತಿಕ್ರಿಯೆ ಕೊಡಬಹುದಿತ್ತು. ಕಿವಿಗೆ ಹೂ ಇಟ್ಟುಕೊಂಡಿದ್ದು ಕಾಂಗ್ರೆಸಿಗರಿಗೆ ದಿವಾಳಿತನ ತೋರಿಸುತ್ತೆ ಎಂದು ಕಿಡಿಕಾರಿದ್ದಾರೆ.

75 ವರ್ಷಗಳಲ್ಲಿ ರಾಜಕೀಯದಲ್ಲಿ ಯಾರು ಈ ರೀತಿ ಮಾಡಿರಲಿಲ್ಲ. ಬಜೆಟ್‌ ಗೆ ಅಪಹಾಸ್ಯ ಮಾಡಿದ ಕುಖ್ಯಾತಿಗೆ ಕಾಂಗ್ರೆಸ್‌ ಗುರಿಯಾಗಿದೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಕಾಂಗ್ರೆಸ್​​​ನಿಂದ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ವಿತರಣೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಕೆ. ಸುಧಾಕರ್, ಕಾಂಗ್ರೆಸ್​​ ಮೇಲೆ ಅವರಿಗೇ ಗ್ಯಾರಂಟಿ ಇಲ್ಲ. ಅದಕ್ಕೆ ಅವರು ಗ್ಯಾರಂಟಿ ಕಾರ್ಡ್ ಹಂಚುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ