ಗಣರಾಜ್ಯೋತ್ಸವʼದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಧ್ವಜಾರೋಹಣ ಮಾಡಿದ ರಾಷ್ಟ್ರಪತಿ ʻದ್ರೌಪದಿ ಮುರ್ಮು

ನವದೆಹಲಿ: ದ್ರೌಪದಿ ಮುರ್ಮು(Droupadi Murmu) ಅವರು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತ್ರ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ್ದಾರೆ.
ಧ್ವಜಾರೋಹಣದ ನಂತರ ರಾಷ್ಟ್ರಗೀತೆಯ ಗಾಯನ ಮತ್ತು 21-ಗನ್ ಸೆಲ್ಯೂಟ್ ನಡೆಯಿತು.
ಇಂದು ದೇಶದಲ್ಲಿ 74 ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಇಂದು ನವದೆಹಲಿಯಲ್ಲಿ ಸಂಪ್ರದಾಯದಂತೆ ತ್ರಿವರ್ಣ ಧ್ವಜದ ಅನಾವರಣವನ್ನು ರಾಷ್ಟ್ರಗೀತೆ ಮತ್ತು ಸಾಂಪ್ರದಾಯಿಕ 21 ಗನ್ ಸೆಲ್ಯೂಟ್ ಅನುಸರಿಸಲಾಯಿತು.
ಕರ್ತವ್ಯ ಪಥಕ್ಕೆ ಆಗಮಿಸಿದ ರಾಷ್ಟ್ರಪತಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಬರಮಾಡಿಕೊಂಡರು. ಕರ್ತವ್ಯ ಪಥದಲ್ಲಿ ಏರ್ ಫೋರ್ಸ್ ಅಧಿಕಾರಿ ಫ್ಲೆಟ್ ಲೆಫ್ಟಿನೆಂಟ್ ಕೋಮಲ್ ರಾಣಿ ಅವರು ರಾಷ್ಟ್ರಧ್ವಜವನ್ನು ಹಾರಿಸಿದರು. ಅದೇ ಸಮಯದಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಯಿತು ಮತ್ತು ರಾಷ್ಟ್ರಪತಿಗಳಿಗೆ 21 ಗನ್ ಸೆಲ್ಯೂಟ್ ಸಲ್ಲಿಸಲಾಯಿತು.