ನಾಡಿದ್ದು ಪ್ರತಿಭಾವಂತರಿಗೆ ಪುರಸ್ಕಾರ

ಹುಬ್ಬಳ್ಳಿ: ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಇತರ ಯುವ ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜೂ.೨೫ರಂದು ಸಂಜೆ ೫ ಗಂಟೆಗೆ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸ್ವಾಭಿಮಾನ ಫೌಂಡೇಷನ್ ಅಧ್ಯಕ್ಷ ಮಂಜುನಾಥ ಕೊಂಡಪಲ್ಲಿ, ಸಾಮಾಜಿಕ ಕಾರ್ಯಕರ್ತ ಡಾ. ಕೆ.ಎಸ್. ಶರ್ಮಾ ಸಮಾರಂಭದ ಅಧ್ಯಕ್ಷತೆ ವಹಿಸುವರು. ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಅತಿಥಿಯಾಗಿ ಪಾಲ್ಗೊಳ್ಳುವರು ಎಂದರು. ಫೌಂಡೇಷನ್ನ ಶರಣಪ್ಪ ಮಮ್ಮಿಗಟ್ಟಿ, ಪುಲಕೇಶ ಮಾಲ್ಯಾಳ, ಮಹೇಶ ಭಂಡಾರಿ, ಸಿ. ತ್ಯಾಗರಾಜ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಧಾರವಾಡ ಬಿಇಒ ಉಮೇಶ್ ಬೊಮ್ಮಕ್ಕನವರ ಪಾಲ್ಗೊಳ್ಳುವರು. ಕಾರ್ಮಿಕ ಮುಖಂಡ ಡಾ. ಕೆ. ಎಸ್. ಶರ್ಮಾ ಅಧ್ಯಕ್ಷತೆ ವಹಿಸುವರು. ಅಂಕಗಳ ಆಧಾರವಿಲ್ಲದೆ ಉತ್ತೀರ್ಣರಾದ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಿ ಅವರಿಗೆ ನೆರವು ನೀಡಲಾಗುವುದು ಎಂದರು.