ಅಂತ್ಯೋದಯ, ಬಿಪಿಎಲ್ ಸೇರಿ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್

ವಿಜಯನಗರ : ಜನವರಿ-2023ಕ್ಕೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಎನ್‍ಎಫ್‍ಎಸ್‍ಎ ಅಡಿಯಲ್ಲಿ ಆಹಾರಧಾನ್ಯ ಹಂಚಿಕೆ ಮಾಡಲಾಗಿದ್ದು, ತಿಂಗಳಾಂತ್ಯದವರೆಗೂ ಪಡಿತರ ಅಕ್ಕಿ ಪಡೆಯಲು ಅವಕಾಶವಿದೆ ಎಂದು ಹರಪನಹಳ್ಳಿ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂತ್ಯೋದಯ ಕಾರ್ಡಿಗೆ 35 ಕೆ.ಜಿ ಅಕ್ಕಿ, ಆದ್ಯತಾ ಕಾರ್ಡ್ ಹೊಂದಿದ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತದೆ. ಎಪಿಎಲ್ ಪಡಿತರ ಚೀಟಿ ಹೊಂದಿದ ಫಲಾನುಭವಿಗಳಿಗೆ ಪ್ರತಿ ಕೆ.ಜಿಗೆ ರೂ.15 ದರದಲ್ಲಿ ಪಡಿತರ ಅಕ್ಕಿ ವಿತರಿಸಲಾಗುತ್ತದೆ.
ಪೋರ್ಟೆಬಿಲಿಟಿ ಅವಕಾಶ: ಅಂತರ್ ರಾಜ್ಯ, ಅಂತರ್ ಜಿಲ್ಲೆ ಪೊರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ ಯಾವದೇ ವರ್ಗದ ಪಡಿತರ ಚೀಟಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶವಿದೆ. ಪಡಿತರ ಚೀಟಿದಾರರು ಜನವರಿ ತಿಂಗಳ ಅಂತ್ಯದವರೆಗೂ ಬಯೋಮೆಟ್ರಿಕ್, ಆಧಾರ್ ಅಥವಾ ಓಟಿಪಿ ಮೂಲಕ ಆಹಾರಧಾನ್ಯ ಪಡೆಯಬಹುದಾಗಿದ್ದು ಫಲಾನುಭವಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.