ಮೋದಿ ಭೇಟಿ: ವಿಮಾನ ಪ್ರಯಾಣಿಕರು ಎಲಿವೆಟೆಡ್‌ ಕಾರಿಡಾರ್‌ ಬಳಸಬೇಡಿ; ಪೊಲೀಸ್‌

ಮೋದಿ ಭೇಟಿ: ವಿಮಾನ ಪ್ರಯಾಣಿಕರು ಎಲಿವೆಟೆಡ್‌ ಕಾರಿಡಾರ್‌ ಬಳಸಬೇಡಿ; ಪೊಲೀಸ್‌

ಬೆಂಗಳೂರು: ವಿಮಾನ ಪ್ರಯಾಣಿಕರು ಶುಕ್ರವಾರ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೆಂಗಳೂರು ನಗರವನ್ನು ಸಂಪರ್ಕಿಸುವ ಎಲಿವೆಟೆಡ್‌ ಕಾರಿಡಾರ್‌ ಬಳಸದಿರುವಂತೆ ಸಲಹೆ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸಲು ನಗರಕ್ಕೆ ಆಗಮಿಸುತ್ತಿರುವುದರಿಂದ ಪೊಲೀಸ್‌ ಅಧಿಕಾರಿಗಳು ಈ ಸಲಹೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸಲು ನಗರಕ್ಕೆ ಆಗಮಿಸುತ್ತಿರುವುದರಿಂದ ಪೊಲೀಸ್‌ ಅಧಿಕಾರಿಗಳು ಈ ಸಲಹೆ ನೀಡಿದ್ದಾರೆ.

'ಕಾರ್ಯಕ್ರಮಕ್ಕಾಗಿ ಗಣ್ಯರ ವಾಹನಗಳು ಈ ಮಾರ್ಗದಲ್ಲಿ ಸಂಚರಿಸಲಿವೆ. ಆದ್ದರಿಂದ, ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸಬೇಕು. ವಿಳಂಬವನ್ನು ತಪ್ಪಿಸಲು ಪ್ರಯಾಣಿಕರು ಹೆಣ್ಣೂರು-ಕೊತ್ತನೂರು- ಬಾಗಲೂರು- ಬೇಗೂರು ಪರ್ಯಾಯ ರಸ್ತೆ ಬಳಸಿ' ಎಂದು ಬೆಂಗಳೂರು ಉತ್ತರ ಡಿಸಿಪಿ (ಸಂಚಾರ) ಎಸ್‌. ಸವಿತಾ ಟ್ವೀಟ್‌ ಮಾಡಿದ್ದಾರೆ.