ಬೆಳಕಿನ ಹಬ್ಬ ದೀಪಾವಳಿಗೆ ಧರ್ಮದ ಕಿಡಿ; ಹಬ್ಬಕ್ಕೆ ಹಲಾಲ್ ಮುಕ್ತ ಅಭಿಯಾನ

ಬೆಂಗಳೂರು: ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಹಲಾಲ್ ಮುಕ್ತ ಅಭಿಯಾನ ಆರಂಭವಾಗಿದೆ. ಈ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದು, ಹಲಾಲ್ ಯಾವುದೋ ಮತ ಪಂತಕ್ಕೆ ಸೀಮಿತವಾಗಿಲ್ಲ. ಎಕನಾಮಿಕ್ ಆಗಿ ಬೆಳೆಯುತ್ತಿದೆ. ಹಲಾಲ್ ಎಂಬುವುದು ಊಟದ ವಿಚಾರವಾಗಿ ಇತ್ತು.
ಭಾರತದಲ್ಲಿ ತಯಾರಿ ಆಗುವ ಎಲ್ಲಾ ವಸ್ತುಗಳಿಗೆ ಹಲಾಲ್ ಸರ್ಟಿಫಿಕೇಟ್ ಹಾಕಲು ಪ್ರಾರಂಭ ಮಾಡಿದ್ದಾರೆ. ಇದು ನಮ್ಮ ಉದ್ಯೋಗವನ್ನು ಕಸಿದು, ಮುಸ್ಲಿಮರಿಗೆ ಉದ್ಯೋಗ ಹಂಚಿಕೆಯಾಗುತ್ತಿದೆ. ಅವರು ಅವರ ದೇವರಿಗೆ ಅರ್ಪಿಸಿದನ್ನು ನಾವು ಯಾಕೆ ನಮ್ಮ ದೇವರಿಗೆ ಕೊಡಬೇಕು. ಹಲಾಲ್ ಪ್ರಾಡಕ್ಟ್ ತೆಗೆದುಕೊಳ್ಳುವುದಿಲ್ಲ ಎಂದು ಎಲ್ಲರೂ ತೀರ್ಮಾನ ಮಾಡಬೇಕು.
ಹಲಾಲ್ ಜಗತ್ತನ್ನು ತಿನ್ನುತ್ತಿದೆ. ಹಲಾಲ್ ಕಟ್ ಇದು ಬರೀ ಮಾಂಸಕ್ಕೆ ಮಾತ್ರ ಸೀಮಿತವಾಗಿಲ್ಲ. ತಮಿಳುನಾಡಿನ ಹಪ್ಪಳದ ಮೇಲೆ ಹಲಾಲ್ ಮಾರ್ಕ್ ಇದೆ. ಈ ಬಗ್ಗೆ ವಿಸ್ತಾರವಾದ ಹೋರಾಟ ಆಗಬೇಕು. ಹಲಾಲ್ ಮಾರ್ಕ್ ಕಂಪನಿ ಭಾರತದ ಎಕನಾಮಿಯನ್ನು ನುಂಗಿಹಾಕುತ್ತಿದೆ. ಭಾರತೀಯ ಉದ್ಯೋಗವನ್ನು ಕಸಿಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ಹಲಾಲ್ ಮಾಡಿರುವುದನ್ನು ನಮ್ಮ ದೇವರಿಗೆ ಇಡಬೇಡಿ. ಸರ್ಕಾರ ಕೊಡುವ ಸರ್ಟಿಫಿಕೇಟ್ಗಿಂತ ಬೇರೆ ಯಾವ ಸರ್ಟಿಫಿಕೇಟ್ ಇಲ್ಲ. ಬಾಯ್ ಕಟ್ ಹಿಂದುಗಳು ಮಾತ್ರ ಮಾಡುತ್ತಿಲ್ಲ, ಬೇರೆ ಕೋಮಿನವರು ಮಾಡುತ್ತಿದ್ದಾರೆ. ಹಲಾಲ್ ಇರುವಲ್ಲಿ ಹಿಂದೂ ಯುವಕರನ್ನು ಕೆಲಸದಿಂದ ತೆಗೆಯುತ್ತಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.