ಗೂಗಲ್ ಫೋಟೋಸ್ನಲ್ಲಿ ಡಿಲೀಟ್ ಆದ ಫೋಟೋ ಹೀಗೆ ಮರಳಿ ಪಡೆಯಿರಿ
ನಿಮ್ಮ ಆಂಡ್ರಾಯ್ಡ್ ಫೋನ್/ ಟ್ಯಾಬ್ಲೆಟ್‌ನಲ್ಲಿ, ಗೂಗಲ್ ಫೋಟೋಸ್ ಆ್ಯಪ್ ತೆರೆಯಿರಿ. ಪರದೆಯ ಕೆಳಭಾಗದಲ್ಲಿ, ‘ಲೈಬ್ರರಿ’ ಟ್ಯಾಬ್ ಇದೆ, ಅದರ ಮೇಲೆ ಟ್ಯಾಪ್ ಮಾಡಿ. ನಂತರ ನೀವು ಮೇಲ್ಭಾಗದಲ್ಲಿ ‘ಟ್ರಾಶ್’ ಫೋಲ್ಡರ್ ಅನ್ನು ಕಾಣಬಹುದು. ನಿಮ್ಮ ಎಲ್ಲಾ ಅಳಿಸಿದ ಫೋಟೋಗಳನ್ನು ಪರೀಕ್ಷಿಸಲು ಅದರ ಮೇಲೆ ಟ್ಯಾಪ್ ಮಾಡಿ ನೀವು ರಿಸ್ಟೋರ್ ಮಾಡಲು ಬಯಸಿದರೆ, ಫೋಟೋ / ವಿಡಿಯೋವನ್ನು ಟಚ್ ಮಾಡಿ & ಪ್ರೆಸ್ ಮಾಡಿ. ನಂತರ, ರಿಸ್ಟೋರ್ ಟ್ಯಾಪ್ ಮಾಡಿ. ಫೋಟೋ / ವಿಡಿಯೋ ಮರಳಿ ಬರುತ್ತದೆ.