ಮಹಿಳಾ ಮಣಿಯರಿಂದ ಕೌದಿ ಸ್ಪರ್ಧೆ

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಧಾರವಾಡದ ಹಾಲಭಾವಿ ಸರ್ವದಾನ ಟ್ರಸ್ಟ್ ವತಿಯಿಂದ ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ ಮಹಿಳೆಯರಿಗೆ ಕೌದಿ, ಹೊಲೆಯುವ ಸ್ಪರ್ಧೆ ಏರ್ಪಡಿಸಲಾಗಿದೆ. ಇನ್ನು ಈ ಸ್ಪರ್ಧೆಯಲ್ಲಿ ಸಾಕಷ್ಟು ಮಹಿಳಾ ಮಣಿಯರು ಭಾಗಿಯಾಗಿದ್ದಾರೆ. ಮಹಿಳೆಯರು ತಾವು ಸಿದ್ದಗೊಳಿಸಿದ್ದ ಕೌದಿಯನ್ನು ಸ್ಪರ್ಧೆಯಲ್ಲಿ ಇರಿಸಿದ್ದಾರೆ. ಕೌದಿ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಕೂಡಾ ಜಿಲ್ಲಾ ಅಭಿಯಾನ ಪರಿಸರ ಸಮಿತಿ ಹಮ್ಮಿಕೊಂಡಿದ್ದಾರೆ.