ಧಾರವಾಡದಲ್ಲಿ ಎಮ್ಮೆ ಪ್ರತಿಭಟನೆ.


ಕೇಂದ್ರ ಸರ್ಕಾರದ ಕರಾಳ ಕಾಯಿದೆ ವಿರೋಧಿಸಿ ಭಾರತ ಬಂದ್ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ರು. ನಗರದ ಆಲೂರು ವೆಂಕಟರಾವ್ ವೃತ್ತದಲ್ಲಿ ಎಮ್ಮೆ ಪ್ರತಿಭಟನೆ ಮಾಡಿದ್ರು.ಹೌದು ಜಯ ಕರ್ನಾಟಕ ಸಂಘಟನೆಯಿಂದ ಎಮ್ಮೆ ತಂದು ಪ್ರತಿಭಟಿಸಿದ್ರು. ಎಮ್ಮೆಯ ಜೊತೆಗೆ ಸೈಕಲ್ ಹೊಡೆದು ಜಯ ಕರ್ನಾಟಕ ಸಂಘದ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.