ಪಿಡಿಓ ಮೇಲೆ ಜಾರಕಿಹೊಳಿ ಬೆಂಬಲಿಗರ ಹಲ್ಲೆ

ಆಸ್ಪತ್ರೆ ಕಂಪೌಂಡ್ ಒತ್ತುವರಿ ತೆರವಿಗೆ ಹೋಗಿದ್ದ ಪಿಡಿಓ ಮೇಲೆ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಜರುಗಿದೆ. ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕನಾಟ್ಟಿ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯ ಕಂಪೌಂಡ್ ಒತ್ತುವರಿ ತೆರವು ಮಾಡಲು ಹೋಗಿದ್ದ ಪಿಡಿಓ ವೀರಭದ್ರ ಗುಂಡಿ ಎಂಬುವವರ ಮೇಲೆ ಈ ಹಲ್ಲೆ ಜರುಗಿದೆ. ಅರಭಾoವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಿದ್ದಪ್ಪ ಹಮ್ಮನವರ ಎಂಬಾತನಿಂದ ಈ ಕೃತ್ಯ ಜರುಗಿದೆ ಎನ್ನಲಾಗಿದೆ.ಅಲ್ಲದೇ,ಈ ವೇಳೆ ಪಿಡಿಓಗೆ ಧಮ್ಕಿ ಸಹ ಹಾಕಲಾಗಿದೆ.ಸಿದ್ದಪ್ಪ, ಯಮನಪ್ಪ, ವೆಂಕಪ್ಪ ವಿರುದ್ಧ ಹಲ್ಲೆ ಆರೋಪ ಸಹ ಮಾಡಲಾಗಿದೆ. ಹಲ್ಲೆ ಮಾಡಿ ಧಮ್ಕಿ ಹಾಕಿದ ಬಗ್ಗೆ ಪಿಡಿಓ ಘಟಪ್ರಭಾ ಠಾಣೆಯಲ್ಲಿ ದೂರ ಸಹ ನೀಡಿದ್ದಾರೆ. ಹಲ್ಲೆ ಮಾಡುತ್ತಿರುವ ವಿಡಿಯೋ ಮೊಬೈಲ್ ನಲ್ಲಿ ಸೆರೆ ಹಿಡಿಯಲು ಮುಂದಾಗುತ್ತಿದ್ದಂತೆ ಮಹಿಳೆಯಿಂದ ಹೈಡ್ರಾಮಾ ನಡೆದಿದೆ.ಮಹಿಳೆಯೋರ್ವಳು ತಾನೇ ಸೀರೆ ಹರಿದುಕೊಂಡು ನನ್ನನ್ನ ಪಿಡಿಓ ಎಳೆದಾಡಿದ್ದಾನೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ.ಬಾಳವ್ವಾ ಹುಲಕುಂದ ಎಂಬ ಮಹಿಳೆ ಪಿಡಿಓ ವಿರುದ್ಧ ಆರೋಪಿಸಿದ್ದಾಳೆ.ಮಹಿಳೆಯನ್ನು ಎಳೆದಾಡಿದ್ದೀಯಾ ಎಂದು ಕೇಸ್ ಕೊಡ್ತೇನಿ ಅಂತಾ ಬಾಲಚಂದ್ರ ಜಾರಕಿಹೊಳಿ ಆಪ್ತ ಸಿದ್ದಪ್ಪ ಧಮ್ಕಿ ಹಾಕಿದ್ದಾನೆ ಎನ್ನಾಲಾಗಿದೆ.