ವರುಣನ ಆರ್ಭಟಕ್ಕೆ ಮಲೆನಾಡಿನಲ್ಕಿ ಜನಜೀವನ ಅಸ್ತವ್ಯಸ್ತ
ಮಲೆನಾಡಿನಲ್ಲಿ ರವಿವಾರ ವರುಣನ ಆರ್ಭಟ ಜೊರಾಗಿದೆ.ಬಾರಿ ಮಳೆಯಿಂದಾಗಿ ರಸ್ತೆ ಮೇಲೆಲ್ಲೆ ಹರಿದ ನೀರು, ಹೊಂಡದಂತಾಗಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ವಾಹನ ಸವಾರರು ಪರದಾಡುವಂತಾಗಿದೆ. ಎನ್.ಆರ್.ಪುರ ಪಟ್ಟಣದ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ಹರಿದ ನೀರಿಂದಾಗಿ ತಾಲೂಕು ಕಛೇರಿಯ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು.ವಾಹನ ಸವಾರರ ಪರದಾಟ ಹೇಳ ತೀರದಂತಾಗಿತ್ತು. ಹಲವು ಗಂಟೆಗಳ ಕಾಲ ಸುರಿದ ಮಳೆಗೆ ರಸ್ತೆ ಜನರು ಸಂಕಷ್ಟ ಎದುರಿಸುವಂತಾಗಿತ್ತು.