ಜನವರಿ 6 ರಿಂದ ವೂಟ್ ಸೆಲೆಕ್ಟ್ ನಲ್ಲಿ 'ಹಂಬಲ್ ಪೊಲಿಟೀಷಿಯನ್ ನೊಗರಾಜ್' ವೆಬ್ ಸೀರಿಸ್

ದಾನಿಶ್ ಸೇಠ್ ಅವರ ಪ್ರತಿಭೆ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ನಟ, ನಿರೂಪಕನಾಗಿ ಅವರು ಈಗಾಗಲೇ ಗಮನ ಸೆಳೆದಿದ್ದಾರೆ. ಆರ್ಸಿಬಿ ಇನ್ಸೈಡರ್ ಆಗಿಯೂ ಅವರು ವಿಶ್ವಾದ್ಯಂತ ಫೇಮಸ್ ಆಗಿದ್ದಾರೆ. ಅವರು ಅಭಿನಯಿಸಿರುವ 'ಫ್ರೆಂಚ್ ಬಿರಿಯಾನಿ', 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಚಿತ್ರಗಳನ್ನು ಜನರು ಮೆಚ್ಚಿಕೊಂಡಿದ್ದಾರೆ.
ಈಗ ಅವರ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಕಥೆ ವೆಬ್ ಸಿರೀಸ್ ರೂಪದಲ್ಲಿ ಬರುತ್ತಿದೆ. ವೂಟ್ ಸೆಲೆಕ್ಟ್ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿರುವ ಈ ವೆಬ್ ಸರಣಿಯ ಟೀಸರ್ ಈಗ ಬಿಡುಗಡೆ ಆಗಿದೆ. 'ಹಂಬಲ್ ಪೊಲಿಟೀಷಿಯನ್ ನೊಗ್‌ರಾಜ್' ವೆಬ್ ಸೀರಿಸ್ ನ ಮೊದಲ ಟೀಸರ್ ಡಿಸೆಂಬರ್ 17ರಂದು ಬಿಡುಗಡೆಯಾಗಿದ್ದು, ಜನವರಿ 6ಕ್ಕೆ ಅದ್ಧೂರಿಯಾಗಿ ವೂಟ್ ಸೆಲೆಕ್ಟ್ ನಲ್ಲಿ ಬಿಡುಗಡೆಯಾಗಲಿದೆ.
ಹಂಬಲ್ ಪೊಲಿಟೀಷಿಯನ್ ನೊಗ್‌ರಾಜ್ ಕಾಮಿಡಿ ಆಧಾರಿತ ವೆಬ್‌ಸೀರಿಸ್ ಆಗಿದ್ದು, ಒಟ್ಟು 10 ಎಪಿಸೋಡ್ ಹೊಂದಿದೆ. ನಟರಾದ ಪ್ರಕಾಶ್ ಬೆಳಬಾಡಿ, ವಿನಯ್ ಚೆಂಡೂರ್ ಮತ್ತು ದಿಶಾ ಮದನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾದ್‌ಖಾನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಡ್ಯಾನಿಶ್ ಸೇಟ್ ಒಬ್ಬ ಸ್ವಯಂ ಸೇವಕನಾಗಿ ಸೇವೆ ಸಲ್ಲಿಸುತ್ತಾ ರಾಜಕೀಯ ಕ್ಷೇತ್ರಕ್ಕೆ ಕಾಲಿಡಲಿದ್ದಾರೆ. ನಂತರ ರೆಸಾರ್ಟ್ ರಾಜಕೀಯ, ಮುಖ್ಯಮಂತ್ರಿ ಸ್ಥಾನಕ್ಕೇರಲು ಏನೆಲ್ಲಾ ಸರ್ಕಸ್ ಮಾಡಲಿದ್ದಾರೆ ಹಾಗೂ ಅಧಿಕಾರಿ ದುರಾಸೆ, ಭ್ರಷ್ಟಾಚಾರ ವನ್ನು ವಿಡಂನಾತ್ಮಕವಾಗಿ ತೆಗೆದುಕೊಂಡು ಹೋಗುವ ಮೂಲಕ ರೋಲರ್ ಕೋಸ್ಟರ್ ಆಗಿ ನೋಗರಾಜ್ ಜನರನ್ನು ರಂಜಿಸಲಿದ್ದಾರೆ. 10 ಎಪಿಸೋಡ್‌ನ ಈ ವೆಬ್‌ಸೀರಿಸ್ ಪೂರ್ತಿ ಪಂಚಿಂಗ್ ಡೈಲಾಗ್ ಹಾಗೂ ನಗುವಿಕೆ ಕೊರತೆ ಇಲ್ಲ.