ಭಾರತ್ ಬಂದ್ ಮಿಶ್ರ ಪ್ರತಿಕ್ರಿಯೆ
ಗದಗ
ಇಂದು ಭಾರತ್ ಬಂದ್ ಹಿನ್ನೆಲೆ ಮುದ್ರನ ಕಾಶಿ ಗದಗ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್ ಸಂಚಾರ, ಆಟೋ ಸಂಚಾರ ಎಂದಿನಂತೆ ಮುಂದುವರೆದಿದ್ದು, ಹೋಟೆಲ್, ದಿನಸಿ ಅಂಗಡಿ ತರಕಾರಿ ಮಾರುಕಟ್ಟೆ ಗಳೆಲ್ಲವನ್ನೂ ತೆರೆಯಲಾಗಿದೆ. ರೈತ ಸಂಘಟನೆಗಳು 11 ಗಂಟೆ ಬಳಿಕ ನಗರದ ಹುಯಿಲಗೋಳ ನಾರಾಯಣರಾವ್ ವೃತ್ತದಿಂದ ಡಿಸಿ ಆಫೀಸ್ ವರೆಗೆ ಮೆರವಣಿಗೆ ನಡೆಸಿ ಜಿಲ್ಲಾಡಳಿತ ಭವನದ ಎದುರು ಹುಬ್ಬಳ್ಳಿ-ಹೊಸಪೇಟೆ ರಾಜ್ಯ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ರೈತರು ಮನವಿ ಸಲ್ಲಿಸಲಿದ್ದಾರೆ.