ಆರಂಭದಲ್ಲಿ ನಿರಾಕರಣೆ, ನಂತರ ಹಿಜಾಬ್ ಕಳಚಿ‌ ಪರೀಕ್ಷೆಗೆ ಹಾಜರ್

ಆರಂಭದಲ್ಲಿ ನಿರಾಕರಣೆ, ನಂತರ ಹಿಜಾಬ್ ಕಳಚಿ‌ ಪರೀಕ್ಷೆಗೆ ಹಾಜರ್

ಹೊಸಪೇಟೆ (ವಿಜಯನಗರ): ಪ್ರಾಚಾರ್ಯರ ಮನವೊಲಿಕೆ ನಂತರ ಎಂಟು ಜನ ವಿದ್ಯಾರ್ಥಿನಿಯರು‌ ಹಿಜಾಬ್ ಕಳಚಿ ಸೋಮವಾರ ನಗರದ ವಿಜಯನಗರ ಕಾಲೇಜಿನಲ್ಲಿ ಪದವಿ ಪರೀಕ್ಷೆಗೆ ಹಾಜರಾದರು.

ಹಿಜಾಬ್ ಧರಿಸಿಕೊಂಡು ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿನಿಯರು ಮುಂದಾಗಿದ್ದರು.

ಆದರೆ, ಪ್ರಾಚಾರ್ಯ ವಿ.ಎಸ್. ಪ್ರಭಯ್ಯ ಅವರನ್ನು ತಡೆದು, ನ್ಯಾಯಾಲಯದ ಆದೇಶ ಇರುವುದರಿಂದ ಅದನ್ನು ಪಾಲಿಸಬೇಕು ಎಂದು ಹೇಳಿದರು. ಆದರೆ, ವಿದ್ಯಾರ್ಥಿನಿಯರು, ಅವರ ಪೋಷಕರು, ನ್ಯಾಯಾಲಯದ ಆದೇಶ ಪಿಯು ಕಾಲೇಜಿಗಳಿಗಷ್ಟೇ ಸೀಮಿತ. ಪದವಿ ಪರೀಕ್ಷೆಗಳಿಗೆ ಅನ್ವಯಿಸುವುದಿಲ್ಲ‌ ಎಂದರು. ಇವರ ವಾದವನ್ನು ಪ್ರಾಚಾರ್ಯರು ತಳ್ಳಿ ಹಾಕಿದರು.

9.30ಕ್ಕೆ ಪರೀಕ್ಷೆ ಆರಂಭಗೊಂಡರೂ ವಿದ್ಯಾರ್ಥಿನಿಯರು ಆವರಣದಿಂದ ಕದಲಲಿಲ್ಲ. 'ಪರೀಕ್ಷೆ ಈಗಷ್ಟೇ ಆರಂಭಗೊಂಡಿದೆ. ಬೇಗ ಹೋಗಿ‌ ಪರೀಕ್ಷೆ ಬರೆಯಿರಿ. ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ' ಎಂದು ಹೇಳಿದರು. ನಂತರ ವಿದ್ಯಾರ್ಥಿನಿಯರು ಹಿಜಾಬ್ ಕಳಚಿ ಪರೀಕ್ಷಾ ಕೊಠಡಿಯೊಳಗೆ ತೆರಳಿದರು. ವಿಷಯ ತಿಳಿದು ಕಾಲೇಜಿನ ಹೊರಗೆ ಜನ ಸೇರಿದ್ದರು.

ಸದ್ಯ, ಬಿ.ಎ, ಬಿಎಸ್ಸಿ, ಬಿಸಿಎ‌ ಪರೀಕ್ಷೆಗಳು ನಡೆಯುತ್ತಿವೆ.