ಅವಳಿನಗರ ಪಾಲಿಕೆಗೆ ಬಿಜೆಪಿಯವರೇ ಮೇಯರ್ ಆಗುತ್ತಾರೆ- ಸಚಿವ ಶಂಕರ್ ಪಾಟೀಲ್ ಮುನ್ನೇನಕೊಪ್ಪ | Shankar Munenkoppa |
ಧಾರವಾಡ- ಹು ಮಾಹಾನಗರ ಪಾಲಿಕೆಯ ಫಲಿತಾಂಶ ಬಂದಿದೆ. ಅದರಲ್ಲಿ ಬಿಜೆಪಿ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲುವ ಮೂಲಕ ದೊಡ್ಡ ಪಕ್ಷವಾಗಿ ಹೊರೊಮ್ಮಿದೆ. ಹಾಗಾಗಿ ಬಿಜೆಪಿಯವರೇ ಈ ಬಾರಿಯು ಪಾಲಿಕೆ ಮೇಯರ್ ಆಗುತ್ತಾರೆ ಎಂದು ಸಚಿವ ಶಂಕರ ಪಾಟೀಲ್ ಮುನ್ನೇನಕೊಪ್ಪರವರು ಹೇಳಿದರು. ಧಾರವಾಡದ ಜಿಲ್ಲಾ ಪಂಚಾಯತಿ ಆವರಣದಲ್ಲಿ ವಿಶೇಷ ಚೇತನರಿಗೆ ತ್ರಿ ಚಕ್ರ ವಾಹನ ವಿತರಣೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹುಬ್ಬಳ್ಳಿ ಧಾರವಾಡ ಅವಳಿನಗರ ಒಂದೇಯಾಗಿದೆ. ಇದರಲ್ಲಿ ಧಾರವಾಡ ಬೇರೆಯಲ್ಲ, ಹುಬ್ಬಳ್ಳಿ ಬೇರೆಯಲ್ಲ. ಎರಡು ನಗರಗಳು ಬೇರೆ ಬೇರೆ ಎಂದು ಗುರಿತಿಸುವುದಕ್ಕೆ ನಾವು ಇಷ್ಟಪಡುವುದಿಲ್ಲ. ಅವಳಿನಗರದಲ್ಲಿ ಒಬ್ಬರು ಬಿಜಿಪಿಯವರೇ ಮೇಯರ್ ಆಗುತ್ತಾರೆ ಎನ್ನುವ ಮೂಲಕ ಮೇಯರ್ ಗುಟ್ಟನ್ನು ಬಿಟ್ಟುಕೊಡಲಿಲ್ಲ. ಧಾರವಾಡ ಕೆಐಎಡಿಬಿಯಲ್ಲಿ ತಪ್ಪು ನಡೆದ್ದರೆ ಕ್ರಮ ಕೈಗೊಳ್ಳಯಲುತ್ತೇವೆ. ಕೆಐಡಿಬಿಯ ವಸತಿ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬೇಲೂರು ಕೈಗಾರಿಕೆ ಪ್ರದೇಶದಲ್ಲಿ ಮೀಸಲಿಟ್ಟ ಭೂಮಿಯನ್ನು ಅಧಿಕಾರಿಗಳು ಬೇರೆಯ ಮೂರಿಗೆ ಹಂಚಿಕೆ ಮಾಡಿದ್ದಾರೆ ಎನ್ನುವುದರ ಕುರಿತು ಪರಿಶೀಲನೆ ನಡೆಸಲಾಗುವುದು. 250 ಎಕರೆ ಭೂಮಿಯ ಹಂಚಿಕೆಯ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ಹಾಗೂ ದಾಖಲಾತಿಗಳನ್ಮು ಪರಿಶೀಲನೆ ಮಾಡುತ್ತೇನೆ. ಒಂದುವೇಳೆ ಸರ್ಕಾರಿ ನಿಯಮ ಉಲ್ಲಂಘನೆ ಮಾಡಿ ಆಗಿದ್ದಲ್ಲಿ ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.