ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಲು ಸಂಸದೆ ಸುಮಲತಾ ಅಂಬರೀಷ್ ಪ್ಲಾನ್!

ಮಂಡ್ಯ: ಬಿಜೆಪಿಗೆ ಸಂಪೂರ್ಣ ಬೆಂಬಲ ಘೋಷಣೆ ಮಾಡಿದ ಬಳಿಕ ಸ್ವಾಭಿಮಾನಿ ಸಂಸದೆ ಸುಮಲತಾ ಅಂಬರೀಷ್ ಚುನಾವಣಾ ಅಖಾಡಕ್ಕೆ ಧುಮುಕ್ಕಿದ್ದಾರೆ. ಮೊದಲ ಟಾರ್ಗೆಟ್ ಫಿಕ್ಸ್ ಮಾಡಿ ಕಾರ್ಯತಂತ್ರವನ್ನು ಎಣೆದಿದ್ದಾರೆ.
ರಾಜಕೀಯ ಬದ್ಧ ವೈರಿಯೇ ರೆಬೆಲ್ ಲೇಡಿಯ ಫಸ್ಟ್ ಟಾರ್ಗೆಟ್ ಆಗಿದೆ.
2008ರಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಅಂಬರೀಷ್ ಸೋಲಿಗೆ ರವೀಂದ್ರ ಶ್ರೀಕಂಠಯ್ಯ ಕಾರಣವಾಗಿದ್ದರು. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ರವೀಂದ್ರ ಶ್ರೀಕಂಠಯ್ಯ ಕಣಕ್ಕಿಳಿದಿದ್ದರು. ರವೀಂದ್ರ ಶ್ರೀಕಂಠಯ್ಯ ಸ್ಪರ್ಧೆಯಿಂದಾಗಿ ರಮೇಶ್ ಬಂಡಿಸಿದ್ದೇಗೌಡ ವಿರುದ್ಧ ಅಂಬರೀಷ್ ಸೋತಿದ್ದರು.
ಸುಮಲತಾ ಸಂಸದರಾದ ಬಳಿಕ ಅವರ ವಿರುದ್ಧ ರವೀಂದ್ರ ಶ್ರೀಕಂಠಯ್ಯ ಪದೇಪದೆ ವಾಗ್ದಾಳಿ ನಡೆಸುತ್ತಾ ಬರುತ್ತಿದ್ದಾರೆ. ಇದೀಗ ತಮ್ಮ ಆಪ್ತರಾಗಿರುವ ಇಂಡುವಾಳು ಸಚ್ಚಿದಾನಂದ ಮೂಲಕ ರವೀಂದ್ರ ಮಣಿಸಲು ಮಾಸ್ಟರ್ ಪ್ಲಾನ್ ಮಾಡಿದ್ದಾರಂತೆ. ಈಗಾಗಲೇ ಕ್ಷೇತ್ರದಾದ್ಯಂತ ಸಾಮಾಜಿಕ ಕೆಲಸಗಳ ಮೂಲಕ ಸಚ್ಚಿದಾನಂದ ಫುಲ್ ಆಕ್ಟೀವ್ ಆಗಿದ್ದಾರೆ. ಸ್ಥಳೀಯ ಮುಖಂಡರ ಜೊತೆ ಸುಮಲತಾ ಸರಣಿ ಗೌಪ್ಯ ಸಭೆ ನಡೆಸುತ್ತಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದವರಿಗೆ ಫೋನ್ ಮಾಡಿ ಮಾತುಕತೆ ನಡೆಸುತ್ತಿದ್ದಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿ ಹಾಗೂ ತಮ್ಮ ಆಪ್ತ ಸಚ್ಚಿದಾನಂದಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಪ್ರಚಾರಕ್ಕೆ ಬರುವ ಮುಂಚೆಯೇ ಸುಮಲತಾ ಅವರು ಫೀಲ್ಡ್ ರೆಡಿ ಮಾಡಿಕೊಳ್ಳುತ್ತಿದ್ದಾರೆ. ಸಚ್ಚಿದಾನಂದ ಗೆಲುವಿಗೆ ಪರದೆ ಹಿಂದೆಯೆ ಕೆಲಸ ಆರಂಭಿಸಿದ್ದಾರೆ. ಈ ಬಾರಿ ಶತಯಾಗತಾಯ ರವೀಂದ್ರ ಶ್ರೀಕಂಠಯ್ಯ ಸೋಲಿಸಲು ಸುಮಲತಾ ಪಣ ತೊಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್)