ಭಾರಿ ಮಳೆ, ಜನಜೀವನ ಅಸ್ತವ್ಯಸ್ತ

ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಜನಜೀವನ ತೀವ್ರ ಅಸ್ತವ್ಯಸ್ತಗೊಂಡಿದೆ.  ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ  ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ, ಬಣಕಲ್, ಬಾಳೂರು, ಜಾವಳಿಯಲ್ಲಿ ಭಾರಿ ಮಳೆ ಸುರಿದೆ. ಧಾರಾಕಾರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನದಿಯಂತೆ ನೀರು ಹರಿದಿದೆ. ಎನ್., ಆರ್.ಪುರ ತಾಲೂಕಿನ  ಮಹಲ್ಗೋಡು ಸಮೀಪದಲ್ಲಿ ತುಂಬಿ ಹರಿದ ಹಳ್ಳದಿಂದಾಗಿ ಸವಾರರು ತೊಂದರೆಗೀಡಾಗಿದ್ದಾರೆ.ಹಳ್ಳದಲ್ಲಿ ನೀರು ಹರಿಯುತ್ತಿದ್ದಾಗ ಬೈಕ್ ಓಡಿಸಲು ಹೋಗಿ  ಬೈಕ್ ಸವಾರರು ಸಿಲುಕಿದ ಘಟನೆ ಸಹ ನಡೆದಿದೆ. ನೀರಿನಲ್ಲಿ ಕೊಚ್ಚಿ ಹೋಗಿದ್ದ ಬೈಕೊಂದು ರಸ್ತೆಯ ಬದಿಯಲ್ಲಿದ್ದ ಮೋರಿಗೆ ತಗುಲಿ ನಿಂತುಕೊಂಡಿದೆ. ಆಗ ನೀರಿನಲ್ಲಿ ಪರದಾಡುತ್ತಿದ್ದ ಬೈಕ್ ಸವಾರರನ್ನುಹಗ್ಗದ ಮೂಲಕ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.  ಇದಲ್ಲದೇ ಬಾಳೆಹೊನ್ನೂರು-ಕಳಸ ಮಧ್ಯದಲ್ಲಿ ಕೆಲ ಕಾಲ ಸಂಪರ್ಕ ಸಹ ಕಡಿತಗೊಂಡಿದೆ.