ಒಡಹುಟ್ಟಿದ ತಂಗಿಯನ್ನೇ ಅತ್ಯಾಚಾರ ಮಾಡಿದ ಅಣ್ಣ

ಒಡಹುಟ್ಟಿದ ತಂಗಿಯನ್ನೇ ಅತ್ಯಾಚಾರ ಮಾಡಿದ ಅಣ್ಣ

ಮೈಸೂರು(ನ.29) : ಕುಡಿದ ಮತ್ತಿನಲ್ಲಿ ಅಣ್ಣನೇ ತನ್ನ ಸ್ವಂತ ತಂಗಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮೈಸೂರಿನ ಬಡಾವಣೆಯೊಂದರಲ್ಲಿ ನಡೆದಿದೆ. ಈ ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮೂವರು ಹೆಣ್ಣು, ಇಬ್ಬರು ಗಂಡು ಸೇರಿದಂತೆ ಐವರು ಮಕ್ಕಳನ್ನು ಹೊಂದಿದ್ದ ತಂದೆ- ತಾಯಿ ಮೃತಪಟ್ಟಿದ್ದರು.

ಚಿಕ್ಕದಿಂನಿಂದಲೂ ತಂಗಿಯರನ್ನು ಪ್ರೀತಿಯಿಂದ ನೋಡಿಕೊಂಡಿದ್ದ ಅಣ್ಣಂದಿರು, ಇಬ್ಬರು ತಂಗಿಯಂದಿರಿಗೆ ಮದುವೆ ಸಹ ಮಾಡಿದ್ದರು. 16 ವರ್ಷದ ಕೊನೆಯ ತಂಗಿ ಮಾತ್ರ ಅಣ್ಣಂದಿರ ಜೊತೆ ವಾಸವಿದ್ದಳು. ಕುಡಿತದ ಚಟಕ್ಕೆ ಬಲಿಯಾಗಿದ್ದ 30 ವರ್ಷದ ಹಿರಿಯ ಸಹೋದರ ಪಾನಮತ್ತನಾದ ಸಮಯದಲ್ಲಿ ಸ್ವಂತ ತಂಗಿಯ ಮೇಲೆ ಅತ್ಯಾಚಾರ ಎಸಗಿದ್ದು, ತಂಗಿ ಗರ್ಭಿಣಿಯಾಗಿರುವುದು ಎರಡು ದಿನಗಳ ಹಿಂದೆ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿರುವ ಆಲನಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.