ಬೆಂಗಳೂರಿನಲ್ಲಿ ಮಾರ್ಕ್ಸ್ ಕಾರ್ಡ್ ದಂಧೆ; 50 ಸಾವಿರ ರೂ. ಕೊಟ್ಟರೆ ಡಿಗ್ರಿ ಪ್ರಮಾಣಪತ್ರ ಸಿಗುತ್ತೆ!

ಬೆಂಗಳೂರಿನಲ್ಲಿ ಮಾರ್ಕ್ಸ್ ಕಾರ್ಡ್ ದಂಧೆ; 50 ಸಾವಿರ ರೂ. ಕೊಟ್ಟರೆ ಡಿಗ್ರಿ ಪ್ರಮಾಣಪತ್ರ ಸಿಗುತ್ತೆ!

ಸಿಲಿಕಾನ್ ಸಿಟಿಯಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ಗಳ ದಂಧೆ ಜೋರಾಗಿ ನಡೀತಾ ಇದೆ. ಕಾಲೇಜು ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡ್ತಿರೋ ಆ ಖತರ್ನಾಕ್ ಗ್ಯಾಂಗ್ ಲಕ್ಷ ಲಕ್ಷ ಹಣ ಲೂಟಿ ಮಾಡ್ತಾ ಇದೆ.. ಕೇವಲ ಐವತ್ತು ಸಾವಿರ ಕೊಟ್ರೆ ಸಾಕು ನಿಮಗೆ ಬಿಕಾಂ, ಡಿಗ್ರಿ ಮಾರ್ಕ್ಸ್ ಕಾರ್ಡ್ ಕೊಡ್ತಾರೆ ಅಂದರೆ.

ಯೋಚನೆ ಮಾಡಿ. ಈ ದಂಧೆ ಎಷ್ಟರಮಟ್ಟಿಗೆ ನಡೀತಾ ಇದೆ ಅಂತ. ಹೌದು ಅಂತಹ ನಕಲಿ ಗ್ಯಾಂಗ್ ವೊಂದನ್ನ ಪೊಲೀಸರು ಎಡೆಮುರಿಕಟ್ಟಿದ್ದಾರೆ.

ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ನಕಲಿ ಮಾರ್ಕ್ಸ್ ಕಾರ್ಡ್ ಮಾರಾಟ ಮಾಡ್ತಿದ್ದ ನಾಲ್ವರು ಅರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು ಮೂಲದ ರಾಕೇಶ್, ಕೃಷ್ಣ ಹಾಗೂ ತನ್ಮಯ್ ಬಂಧಿತ ಆರೋಪಿಗಳಾಗಿದ್ದು, ಹೆಬ್ಬಾಳದ ಕೆಂಪಾಪುರ ಬಳಿ ಡ್ರೀಮ್ ಎಜುಕೇಶನ್ ಸರ್ವಿಸ್ ಹೆಸರಲ್ಲಿ ಕಚೇರಿ ತೆರೆದು ಪ್ರತಿಷ್ಠಿತ ಶಾಲಾ ಕಾಲೇಜುಗಳ ಸೀಲ್ ಗಳನ್ನು ನಕಲು ಮಾಡಿ 50 ಸಾವಿರಕ್ಕೆ ಬಿಕಾಂ, ಡಿಗ್ರಿ ಸರ್ಟಿಫಿಕೇಟ್ ಗಳನ್ನು ನಕಲು ಮಾಡಿ ಮಾರಾಟ ಮಾಡುತ್ತಿದ್ದರು.

ಜೊತೆಗೆ ಒಂದೊಂದು ಡಿಗ್ರಿ ಸರ್ಟಿಫಿಕೇಟ್ ಗೂ ಒಂದೊಂದು ರೇಟ್ ಫಿಕ್ಸ್ ಮಾಡ್ತಿದ್ದ ಈ ಖದೀಮರ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ಬಂದಿರುತ್ತೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಇಷ್ಟು ಜನರನ್ನ ಬಂಧನ ಮಾಡಿದ್ದಾರೆ.

ಈ ಪ್ರಕರಣದ ಹಿಂದೆ ಬೇರೆ ಯಾರ್ಯಾರು ಇದ್ದಾರೆ ಅನ್ನೋ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.. ಒಟ್ಟಾರೆ ನಕಲಿ ಮಾರ್ಕ್ಸ್ ಕಾರ್ಡ್ ತಯಾರಿಸಿ ವಿದ್ಯಾರ್ಥಿಗಳ ಬಾಳಲ್ಲಿ ಚೆಲ್ಲಾಟವಾಡ್ತಿದ್ದವರಿಗೆ ಪೊಲೀಸರಿಗೆ ಸರಿಯಾದ ಪಾಠ ಕಲಿಸಿದ್ದಾರೆ.