ಬಿಟ್ ಕಾಯಿನ್ ಪ್ರಕರಣ: IPS ಅಧಿಕಾರಿ ಸ್ಫೋಟಕ "ಆಡಿಯೋ ವೈರಲ್"! ಶುರುವಾಯಿತು ರಾಜಕಾರಣಿಗಳಿಗೆ ನಡುಕ!

ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹೆಸರು ಹೇಳಿದರೆ ರಾಜಕಾರಣಿಗಳು, ಸೆಲೆಬ್ರಿಟಿಗಳು ಗುಳೆ ಹೋಗುತ್ತಾರೆ. ರಾಜಕಾರಣಿಗಳು ಮತ್ತು ಅವರ ಮಕ್ಕಳು ದೊಡ್ಡ ಪ್ರಮಾಣದ ಬಿಟ್‌ಕಾಯಿನ್ ಹಣವನ್ನು ಪಡೆದಿದ್ದಾರೆ ಎಂಬ ಆರೋಪವಿದೆ. ಇದು ಭಾರೀ ರಾಜಕೀಯ ಸಂಚಲನಕ್ಕೆ ಕಾರಣವಾಗಿತ್ತು.
ಬಹುಕೋಟಿ ಬಿಟ್ ಕಾಯಿನ್ ಹಗರಣ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಸದ್ಯ ತನಿಖಾಧಿಕಾರಿ ಮಾತನಾಡಿದ ಆಡಿಯೋ ವೈರಲ್ ಆಗಿದೆ
ಇದರಿಂದ ರಾಜಕೀಯ ವ್ಯಕ್ತಿಗಳಿಗೆ ಮತ್ತು ಅವರ ಮಕ್ಕಳಿಗೆ ಕಂಟಕವಾಗಲಿದೆ, ತನಿಖೆ ವೇಳೆ ಶ್ರೀಕಿ ಅನೇಕರ ಹೆಸರುಗಳನ್ನೂ ಬಾಯಿಬಿಟ್ಟಿದ್ದಾನೆನ್ನುವುದು ಪೊಲೀಸ್ ಅಧಿಕಾರಿಗಳಿಗೆ ತಲೆ ನೋವಾಗಿದೆ
ಈ ಆಡಿಯೋ ಸಂಭಾಷಣೆ ಸಧ್ಯಕ್ಕೆ ಪೊಲೀಸ್ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದೆ.ಇನ್ನ್ಯಾರರ ಹೆಸರುಗಳು ಈ ಬಿಟ್ ಕಾಯಿನ್ ಅಕ್ರಮದಲ್ಲಿ ಥಳಕು ಹಾಕ್ಕೊಂಡಿರಬಹುದೋ ಎನ್ನುವ ಅನುಮಾನ ಕಾಡುತ್ತಿದೆ.