ಮಾಜಿ ಪ್ರಧಾನಿ ರಾಜೀವ್‍ಗಾಂಧಿಗೆ 'ನಮೋ' ನಮನ

ಮಾಜಿ ಪ್ರಧಾನಿ ರಾಜೀವ್‍ಗಾಂಧಿಗೆ 'ನಮೋ' ನಮನ

ನವದೆಹಲಿ,ಆ.20-ಮಾಜಿ ಪ್ರಧಾನಿ ದಿ.ರಾಜೀವ್‍ಗಾಂಧಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ವಂದನೆ ಸಲ್ಲಿಸಿದ್ದಾರೆ. ರಾಜೀವ್‍ಗಾಂಧಿ ಅವರ 77ನೆ ಜನ್ಮದಿನಾಚರಣೆ ನಿಮಿತ್ತ ಟ್ವಿಟ್ ಮಾಡಿರುವ ಮೋದಿ ಅವರು, ನಮ್ಮ ಮಾಜಿ ಪ್ರಧಾನಮಂತ್ರಿಗಳಿಗೆ ಜನ್ಮ ದಿನದ ನಮನಗಳು ಎಂದು ತಿಳಿಸಿದ್ದಾರೆ.

1944ರಲ್ಲಿ ಜನಿಸಿದ ರಾಜೀವ್‍ಗಾಂಧಿ ಅವರು, ಇಂದಿರಾಗಾಂಧಿ ಅವರ ಪುತ್ರರಾಗಿದ್ದು, 1984-1989ರ ಅವಧಿಯಲ್ಲಿ ದೇಶದ ಪ್ರಧಾನಮಂತ್ರಿಗಳಾಗಿದ್ದರು.
1991ರಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ರಾಜೀವ್‍ಗಾಂಧಿ ಅವರು ಸಾವಿಗೀಡಾಗಿದ್ದರು.