ವಿವಾದ ಸೃಷ್ಟಿಸಿಕೊಳ್ಳದೆ ಸರ್ಕಾರ ನಡೆಸಲಿದ್ದಾರೆ ಬೊಮ್ಮಾಯಿ: ಕೋಡಿಮಠ ಶ್ರೀಗಳ ಭವಿಷ್ಯ
ವಿವಾದ ಸೃಷ್ಟಿಸಿಕೊಳ್ಳದೆ ಸರ್ಕಾರ ನಡೆಸಲಿದ್ದಾರೆ ಬೊಮ್ಮಾಯಿ: ಕೋಡಿಮಠ ಶ್ರೀಗಳ ಭವಿಷ್ಯ
ಶಿವಮೊಗ್ಗ: ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಮುನ್ನಡೆಸಲಿದ್ದಾರೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಜಿಲ್ಲೆಯ ಸೊರಬದ ಜಡೆ ಸಂಸ್ಥಾನ ಮಠದ ಶ್ರೀ ಸಿದ್ದವೃಷಭೇಂದ್ರ ಸ್ವಾಮೀಜಿ ಅವರ ಕರ್ತೃ ಗದ್ದುಗೆಯ ದರ್ಶನ ಪಡೆದ ನಂತರಸುದ್ದಿಗಾರರ ಜೊತೆ ಮಾತನಾಡಿದ ಶ್ರೀಗಳು, ಬೊಮ್ಮಾಯಿ ಅವರು ಸರಳ, ಸಜ್ಜನಿಕೆಯ ಚಾಣಾಕ್ಷ್ಯತನದಿಂದ ಮುಖ್ಯಮಂತ್ರಿ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದು ತಿಳಿಸಿದರು..
ಜಗತ್ತಿನ ಭೂಪಟದಲ್ಲಿ ಒಂದು ದೇಶ ಅಸ್ತಿತ್ವದಲ್ಲೇ ಇರುವುದಿಲ್ಲ ಎಂದು ಮೊದಲೇ ಭವಿಷ್ಯ ನುಡಿದಿದ್ದೆ. ಈಗ ನೋಡಿ ಅಫ್ಘಾನಿಸ್ತಾನದ ಸ್ಥಿತಿ, ತಾಲಿಬಾನಿಗಳ ಕೈಯಲ್ಲಿ ಸಿಲುಕಿ ನಲುಗುತ್ತಿದೆ ಎಂದು ತಿಳಿಸಿದರು.
ಕೊರೊನಾ ಇನ್ನೂ ಐದು ವರ್ಷಗಳ ವರೆಗೆ ಸಂಪೂರ್ಣವಾಗಿ ನಾಶವಾಗುವುದಿಲ್ಲ. ಆದರೆ ಜನ ಕೊರೊನಾ ಬಗ್ಗೆ ಭಯಪಡುವ ಅಗತ್ಯವಿಲ್ಲ. ಮಕ್ಕಳ ಬಗ್ಗೆಯೂ ಆತಂಕಪಡುವ ಅಗತ್ಯವಿಲ್ಲ. ಸ್ವಚ್ಛತೆ ಬಗ್ಗೆ ಗಮನಹರಿಸಿ ಮುಂಜಾಗ್ರತಾ ಕ್ರಮ ವಹಿಸುವುದು ಸೂಕ್ತ ಎಂದು ಕೋಡಿಮಠದ ಶ್ರೀಗಳು ಹೇಳಿದರು.