ಅಪ್ರಾಪ್ತೆಯ ಮೇಲೆ 6 ತಿಂಗಳಲ್ಲಿ 400 ಮಂದಿಯಿಂದ ಅತ್ಯಾಚಾರ!

ಅಪ್ರಾಪ್ತೆಯ ಮೇಲೆ 6 ತಿಂಗಳಲ್ಲಿ 400 ಮಂದಿಯಿಂದ ಅತ್ಯಾಚಾರ!

ಪ್ರಪಂಚದಲ್ಲಿ ಎಂಥೆಂಥಾ ವಿಲಕ್ಷಣ ಘಟನೆಗಳು ನಡೆಯುತ್ತವೆ ಅಂದರೆ, ಅದನ್ನು ಹೇಳಿಕೊಳಲಾಗದಷ್ಟು ವಿಚಿತ್ರ ಘಟನೆಗಳು ನಡೆಯುತ್ತಲೆ ಇರುತ್ತವೆ. ಅದು ಹೆಣ್ಣು ಮಕ್ಕಳ ಮೇಲೆ ಆಗುತ್ತಿರವ ಶೋಷಣೆಗಳಂತು ಯಾರಿಂದಲೂ ತಡೆಯಲು ಆಗುತ್ತಿಲ್ಲ.ಪ್ರತಿದಿನ ಅತ್ಯಾಚಾರ , ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.

ಅದರಲ್ಲೂ ನಮ್ಮ ದೇಶದಲ್ಲಿ ಹೆಚ್ಚು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರಗಳು ನಡೆಯುತ್ತಲೇ ಇವೆ. ಈಗ ನಾವು ಹೇಳುತ್ತಿರುವ ಘಟನೆ ಬಗ್ಗೆ ನಿಮಗೆ ತಿಳಿದರೆ ಘಾಸಿಯಾಗುತ್ತೆ. ಇಂಥ ಘಟನೆಗಳು ನಡೆಯುತ್ತವಾ ಎಂಬ ಅನುಮಾನ ಮೂಡುತ್ತೆ. ಇಂಥಹ ಪ್ರಕರಣಗಳನ್ನು ಕೇಳಿದಾಗ ನಿಮ್ಮ ರಕ್ಷ ಕುದಿಯುತ್ತೆ. ಪ್ರತಿಸಲವೂ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಾಗ, ಮೇಣದ ಬತ್ತಿ ಹಿಡಿದುಕೊಂಡು ಮೌನ ಪ್ರತಿಭಟನೆ ಮಾಡಿ ಸುಮ್ಮನಾಗುತ್ತಾರೆ. ಮತ್ತೆ ಮರುದಿನ ಇಂತಹದ್ದೇ ಪ್ರಕರಗಳು ನಡೆಯುತ್ತಲೇ ಇವೆ. ಇಲ್ಲಿ ಈ ಯುವತಿಯ ಜೀವನದಲ್ಲಿ ನಡೆದ ಘಟನೆ, ಯಾವ ಹೆಣ್ಣು ಮಕ್ಕಳಿಗೆ ಬರದೇ ಇರಲಿ. ಆ ಹೆಣ್ಣು ಮಗಳು ಅನುಭವಿಸಿದ ನೋವು ಆ ದೇವರಿಗೆ ಗೊತ್ತು.

ಮಹಾರಾಷ್ಟ್ರದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ತಾಯಿಯನ್ನು ಕಳೆದುಕೊಂಡಿದ್ದಳು. ಈಕೆಯನ್ನು ದೊಡ್ಡವಳಾದ ಮೇಲೆ ಒಳ್ಳೆಯ ಕುಟುಂಬಕ್ಕೆ ಮದುವೆ ಮಾಡಿಕೊಡುತ್ತೇನೆ ಎಂದು ತಾಯಿ ಮೃತಪಟ್ಟಿದ್ದಳು. ಇತ್ತ ತಂದೆ ಮಗಳನ್ನು ಬೇಗ ಮದುವೆ ಮಾಡಿ ಕಳುಹಿಸಬೇಕೆಂದು, ಹಿಂದೆ ಮುಂದೆ ನೋಡದೇ ವರನನ್ನು ತಂದು ಮದುವೆ ಮಾಡಿದ್ದರು. ಬಳಿಕ ಆ ಯುವತಿ ಗಂಡನ ಮನೆ ಸೇರಿದ್ದಳು. ಆಕೆಯ ಗಂಡ 6 ತಿಂಗಳು ಕೆಲಸ ಟ್ರೈನಿಂಗ್​ ಹಿನ್ನೆಲೆ ಬೇರೆ ಊರಿಗೆ ತೆರಳಿದ್ದ. ಇತ್ತ ಮನೆಯಲ್ಲೇ ಇರುತ್ತಿದ್ದ ಸೊಸೆ ಮೇಲೆಯೇ ಮಾವ ಕಣ್ಣು ಹಾಕಿದ್ದಾನೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದಾನೆ.

ಇದಾದ ಬಳಿಕ ಯುವತಿ ಈ ವಿಚಾರವನ್ನು ಗಂಡನ ಬಳಿ ಹೇಳಿಕೊಳ್ಳಲಾಗದೇ ಕೆಲಸ ಹುಡುಕಿಕೊಂಡು ಅಂಬೆಜೋಗಿ ಪಟ್ಟಣಕ್ಕೆ ಬಂದಿದ್ದಳು. ಇಲ್ಲೂ ಕೂಡ ಆಕೆಗೆ ಕೆಲಸ ಕೊಡಿಸುವ ಆಸೆ ತೋರಿಸಿ ಇಬ್ಬರು ಅತ್ಯಾಚಾರವೆಸಗಿದ್ದಾರೆ. ಬಳಿಕ ಕೆಲಸವು ಕೊಡಿಸದೇ ವಂಚನೆ ಮಾಡಿದ್ದಾರೆ. ಅವರಿಬ್ಬರನ್ನು ನಂಬಿ ಯುವತಿ ಮೋಸ ಹೋಗಿದ್ದಳು. ಕೆಲಸ ಕೊಡಿಸುವ ನೆಪದಲ್ಲಿ ಆಕೆ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದಾರೆ. ಇದಾದ ಬಳಿಕ ನಡೆದಿದ್ದು ನಿಜಕ್ಕೂ ದುರಂತ.

ಇದಾದ ಬಳಿಕ ಆಕೆ ಮೇಲೆ ನಿರಂತರವಾಗಿ 400 ಮಂದಿ ಅತ್ಯಾಚಾರ ಮಾಡಿದ್ದಾರೆ. ಪೊಲೀಸರು ಕೂಡ ತಮ್ಮ ತೀಟೆ ತಿರಿಸಿಕೊಳ್ಳಲು ಆಕೆಯನ್ನು ಬಳಸಿಕೊಂಡಿದ್ದಾರೆ. ಯಾವುದೋ ಜಾಲದಲ್ಲಿ ಸಿಲುಕಿ 400 ಮಂದಿ ಆಕೆ ಮೇಲೆ ಅತ್ಯಾಚಾರವೆಸಿಗಿದ್ದಾರೆ. ಈಗ ಆಕೆ ಗರ್ಭಿಣಿಯಾಗಿದ್ದಾಳೆ. ಅತ್ತ ಗಂಡನಿಗೆ ಈ ವಿಚಾರ ತಿಳಿದು ದೂರ ಮಾಡಿದ್ದಾನೆ. ಇತ್ತ ದಿಕ್ಕು ದೋಚದೆ ಈಕೆ ಕಂಗಾಲಗಿದ್ದಾಳೆ. ಆಕೆಯ ಜೀವನದಲ್ಲಿ ಊಹೆ ಮಾಡಿಕೊಳ್ಳದಂತಹ ಘಟನೆಗಳು ನಡೆದು ಹೋಗಿವೆ. ಮತ್ತೆ ಮರಳಿ ಹಿಂದೆ ಹೋಗಬೇಕೆಂದರೂ ಸಾಧ್ಯವಿಲ್ಲ. ಯಾರ ಜೀವನದಲ್ಲೂ ಈ ರೀತಿಯ ಘಟನೆಗಳು ನಡೆಯದಿರಲಿ.

ದಿಕ್ಕು ತೋಚದೆ ಕಂಗಲಾಗಿದ್ದ ಯುವತಿಯನ್ನು ಮಕ್ಕಳ ಇಲಾಖೆ ಸಮಿತಿ ರಕ್ಷಿಸಿದೆ. ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ದಾಖಲಿಸಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. 400 ಮಂದಿ ಈಕೆ ಮೇಲೆ ಅತ್ಯಾಚಾರ ಮಾಡಿದ್ದು, ಕೇವಲ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಆಕೆ ಈಗ 2 ತಿಂಗಳ ಗರ್ಭಿಣಿಯಾಗಿದ್ದಾಳೆ. ಈಕೆಯ ಮುಂದಿನ ಭವಿಷ್ಯವಾದರೂ ಚೆನ್ನಾಗಿರಲಿ ಅಂತಿದ್ದಾರೆ ಅಧಿಕಾರಿಗಳು.