ಬೆಂಗಳೂರು ವಿವಿ ಕ್ಯಾಂಪಸ್ ನಲ್ಲಿ ಕಾಣಿಸಿಕೊಂಡಿದ್ದು ಚಿರತೆ ಅಲ್ಲ, ಕಾಡುಬೆಕ್ಕು; ಅರಣ್ಯ ಅಧಿಕಾರಿಗಳ ಸ್ಪಷ್ಟನೆ
ಬೆಂಗಳೂರು: ಇತ್ತೀಚೆಗೆ ಬೆಂಗಳೂರು ವಿವಿ ಕ್ಯಾಂಪಸ್ ನಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಸುದ್ದಿಯಾಗಿತ್ತು. ಇದರಿಂದ ಜನರು ಓಡಾಡುವುದಕ್ಕೆ ಭಯಪಡುತ್ತಿದ್ದರು.
ಆದರೆ ಅದು ಕಾಣಿಸಿಕೊಂಡಿದ್ದು ಚಿರತೆಯಲ್ಲ, ಅದೇ ತರಹದ ಕಾಡುಬೆಕ್ಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವನ್ಯಜೀವಿ ಸಂರಕ್ಷಣೆ ಕಾರ್ಯಕರ್ತರು ವಿವರಣೆ ನೀಡಿದ್ದಾರೆ.