ಇಂದು ಪ್ರಧಾನಿ ಮೋದಿ ಆಗಮನ : ಯಾದಗಿರಿ, ಕಲಬುರಗಿಯಲ್ಲಿ 1500 ಸಿಬ್ಬಂದಿಯಿಂದ ತಯಾರಾಗುತ್ತಿದೆ ಅಡುಗೆ

ಇಂದು ಪ್ರಧಾನಿ ಮೋದಿ ಆಗಮನ : ಯಾದಗಿರಿ, ಕಲಬುರಗಿಯಲ್ಲಿ 1500 ಸಿಬ್ಬಂದಿಯಿಂದ ತಯಾರಾಗುತ್ತಿದೆ ಅಡುಗೆ

ಯಾದಗಿರಿ: ಇಂದು ಯಾಗಿರಿ ಮತ್ತು ಕಲಬುರಗಿ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದಾರೆ. ಜಿಲ್ಲೆ ಹುಣಸಗಿ ತಾಲೂಕಿನ ಕೊಡೆಕಲ್​ನಲ್ಲಿ ಬೃಹತ್‌ ಸಮಾವೇಶ ನಡೆಯಲಿದೆ.

ಈ ಸಮಾವೇಶಕ್ಕೆ ಬರುವವರಿಗೆ ಪಲಾವ್, ಮೊಸರನ್ನ, ಪಾಯಸ ವ್ಯವಸ್ಥೆ ಮಾಡಲಾಗಿದೆ.

ಸುಮಾರು 300 ಕೌಂಟರ್ ಮೂಲಕ ಊಟ ಸಿಬ್ಬಂದಿ ಬಡಿಸಲಿದ್ದಾರೆ. ಸಮಾವೇಶಕ್ಕೆ ಬರುವ ಸುಮಾರು 3 ಲಕ್ಷ ಜನರಿಗೆ ಊಟ ತಯಾರಿ ಮಾಡಲಾಗುತ್ತಿದೆ. ಸಮಾವೇಶಕ್ಕೆ ಬರುವ ಗಣ್ಯರಿಗೆ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಲಾಗಿದ್ದು ಸುಮಾರು 200 ಗಣ್ಯರಿಗೆ ಸಿಬ್ಬಂದಿ ಊಟ ಸಿದ್ಧಪಡಿಸುತ್ತಿದ್ದಾರೆ.

ಸಮಾವೇಶಕ್ಕೆ ಬರುವ ವಿಐಪಿಗಳಿಗೆ ಮೆಂತ್ಯ ಚಪಾತಿ, ಹೋಳಿಗೆ, ಕುರ್ಮಾ, ಹೆಸರುಕಾಳು ಪಲ್ಯ, ಅನ್ನ ಸಾಂಬರ್, ಮೊಸರು ಬಜ್ಜಿ ಸಿದ್ಧವಾಗುತ್ತಿದೆ.ಇತ್ತ, ಕಲಬುರಗಿ ಜಿಲ್ಲೆಯ ಮಳಖೇಡ್​ನಲ್ಲಿ ನಡೆಯುವ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಂದವರಿಗೆ ಪಲಾವ್ ಸಿದ್ಧವಾಗುತ್ತಿದೆ. ಐನೂರಕ್ಕೂ ಹೆಚ್ಚು ಸಿಬ್ಬಂದಿ ಅಡುಗೆ ತಯಾರಿಯಲ್ಲಿ ಮುಳುಗಿದ್ದಾರೆ. ಮೂರು ಲಕ್ಷ ಜನರಿಗೆ ಆಗುವಷ್ಟು ಆಹಾರ ಸಿದ್ದವಾಗುತ್ತಿದೆ.