ತಾಲಿಬಾನಿಗಳ ಕ್ರೌರ್ಯ: ಹೆಲಿಕಾಪ್ಟರ್ ಗೆ ನೇತು ಹಾಕಿದ ದೇಹದೊಂದಿಗೆ ಗಸ್ತು, ವಿಡಿಯೋ ವೈರಲ್

ತಾಲಿಬಾನಿಗಳ ಕ್ರೌರ್ಯ: ಹೆಲಿಕಾಪ್ಟರ್ ಗೆ ನೇತು ಹಾಕಿದ ದೇಹದೊಂದಿಗೆ ಗಸ್ತು, ವಿಡಿಯೋ ವೈರಲ್

ತಾಲಿಬಾನಿಗಳ ಕ್ರೌರ್ಯ: ಹೆಲಿಕಾಪ್ಟರ್ ಗೆ ನೇತು ಹಾಕಿದ ದೇಹದೊಂದಿಗೆ ಗಸ್ತು, ವಿಡಿಯೋ ವೈರಲ್

ಹೊಸ ವಿಡಿಯೋ ಹೊರಹೊಮ್ಮಿದ್ದು, ಇದರಲ್ಲಿ  ಅಮೆರಿಕ   ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಅಫ್ಘಾನಿಸ್ತಾನದ ಕಂದಹಾರ್ ಮೇಲೆ ಹಾರುತ್ತಿರುವಾಗ ಅದಕ್ಕೆ ದೇಹವನ್ನು ಹಗ್ಗದಿಂದ ನೇತುಹಾಕಿರುವುದನ್ನು ಕಾಣಬಹುದಾಗಿದೆ.
ಕಂದಹಾರ್ ಪ್ರಾಂತ್ಯದಲ್ಲಿ ಗಸ್ತು ತಿರುಗಲು ತಾವೇ ತೆಗೆದುಕೊಂಡಿರುವ ಅಮೆರಿಕದ ಮಿಲಿಟರಿ ಹೆಲಿಕಾಪ್ಟರ್‌ನಲ್ಲಿ ಕ್ರೂರ ತಾಲಿಬಾನ್‌ಗಳು ಒಬ್ಬ ವ್ಯಕ್ತಿಯನ್ನು ಕೊಂದಿದ್ದಾರೆ ಮತ್ತು ಆತನಿಗೆ ನೇಣು ಹಾಕಿ ಹೆಲಿಕ್ಯಾಪ್ಟರಿಗೆ ಹಗ್ಗದಿಂದ ಕಟ್ಟಿದ್ದಾರೆ ಎಂದು ಹಲವಾರು ಪತ್ರಕರ್ತರು ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಕಂದಹಾರ್ ಪ್ರಾಂತ್ಯದ ಮೇಲೆ ತಾಲಿಬಾನ್ ಹಾರಾಡುತ್ತಿದ್ದಂತೆ ಅಮೆರಿಕದ ಮಿಲಿಟರಿ ಹೆಲಿಕ್ಯಾಪ್ಟರ್‌ನಿಂದ ಓರ್ವ ವ್ಯಕ್ತಿ ತೂಗಾಡುತ್ತಿರುವುದನ್ನು ಈ ದೃಶ್ಯಗಳು ತೋರಿಸಿವೆ.

ನೆಲದಿಂದ ಚಿತ್ರೀಕರಿಸಿದ ವಿಡಿಯೋ ಚಾಪರ್‌ಗೆ ಕಟ್ಟಿದ ವ್ಯಕ್ತಿ ಬದುಕಿದ್ದಾನೆಯೇ ಎಂಬುದನ್ನು ಸ್ಪಷ್ಟವಾಗಿ ತೋರಿಸುವುದಿಲ್ಲ, ಆದರೆ ತಾಲಿಬ್‌ಗಳು ತಾವು ಕೊಂದ ವ್ಯಕ್ತಿಯ ದೇಹವನ್ನು ಕಟ್ಟಿರುವುದಾಗಿ ವರದಿಗಳು ಹೇಳಿವೆ.
ಕಳೆದ ತಿಂಗಳು ಅಮೆರಿಕವು ಅಫ್ಘಾನಿಸ್ತಾನಕ್ಕೆ ಕನಿಷ್ಠ 7 ಬ್ಲ್ಯಾಕ್ ಹಾಕ್ ಚಾಪರ್‌ಗಳನ್ನು ಪೂರೈಸಿದೆ ಎಂದು ಡೈಲಿ ಮೇಲ್ ಹೇಳಿದೆ, ಜೊತೆಗೆ 20 ವರ್ಷಗಳಲ್ಲಿ ಅಫ್ಘಾನಿಸ್ತಾನದಲ್ಲಿ ನಿರ್ಮಿಸಿದ ಎಲ್ಲಾ ರಕ್ಷಣಾ ಸಾಧನಗಳನ್ನು ಈಗ ಕೈಬಿಡಲಾಗಿದೆ.
ಮಂಗಳವಾರ ತಮ್ಮ ಆತುರದ ನಿರ್ಗಮನದ ನಂತರ, ಅಮೆರಿಕ ಮಿಲಿಟರಿ ಅಂತಿಮ ವಿಮಾನವನ್ನು ಏರುವ ಮೊದಲು 73 ವಿಮಾನಗಳು, 27 ಹಮ್ವೀಗಳು, ಶಸ್ತ್ರಾಸ್ತ್ರ ವ್ಯವಸ್ಥೆಗಳು ಮತ್ತು ಇತರ ಹೈಟೆಕ್ ರಕ್ಷಣಾ ಸಾಧನಗಳನ್ನು ನಿಷ್ಕ್ರಿಯಗೊಳಿಸಿದೆ ಎಂದು ಹೇಳಿದೆ.
ಕಾಬೂಲ್ ವಿಮಾನ ನಿಲ್ದಾಣದಿಂದ ಾಮೆರಿಕ ಸೈನ್ಯವನ್ನು ಹಿಂತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ, ತಾಲಿಬಾನ್ ಆವರಣವನ್ನು ಪ್ರವೇಶಿಸಿತು ಮತ್ತು ಚಿನೂಕ್ ಚಾಪರ್‌ಗಳು ಮತ್ತು ಅಮೆರಿಕ ಸೈನ್ಯವು ಬಿಟ್ಟುಹೋದ ಇತರ ರಕ್ಷಣಾ ಸಾಧನಗಳನ್ನು ಪರೀಕ್ಷಿಸಿತು.