ಚೀನಾದಿಂದ ಭಾರತೀಯ ಯುವಕ ಕಿಡ್ನಾಪ್: ಮೌನ ವಹಿಸಿದ ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

ಚೀನಾದಿಂದ ಭಾರತೀಯ ಯುವಕ ಕಿಡ್ನಾಪ್: ಮೌನ ವಹಿಸಿದ ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ
ಅರುಣಾಚಲ ಪ್ರದೇಶದ ಅಪ್ಪರ್​ ಸಿಯಾಂಗ್​ ಜಿಲ್ಲೆಯ 17 ವರ್ಷದ ಯುವಕನನ್ನು ಚೀನಾ ಸೈನಿಕರು ಅಪಹರಣಗೈದ ಬಗ್ಗೆ ಮೌನ ಧೋರಣೆ ತಾಳಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.

ಗಣರಾಜ್ಯೋತ್ಸವ ದಿನಾಚರಣೆಗೂ ಕೆಲವೇ ದಿನಗಳ ಮುಂಚೆ ಭಾರತದ ಭವಿಷ್ಯವಾದ ಯುವಕನನ್ನು ಚೀನಾ ಅಪಹರಿಸಿದೆ.

ನಾವು ಎಂದಿಗೂ ಮಿರಾಂ ತರೋನ್​ ಕುಟುಂಬದ ಜೊತೆಗೆ ಇದ್ದೇವೆ ಹಾಗೂ ನಾವು ಯಾವುದೇ ಕಾರಣಕ್ಕೂ ಭರವಸೆ ಕಳೆದುಕೊಳ್ಳುವುದಿಲ್ಲ. ನಾವು ಸೋಲನ್ನು ಒಪ್ಪಿಕೊಳ್ಳುವ ಮಾತೇ ಇಲ್ಲ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.

ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮೌನವನ್ನು ನೋಡಿದರೆ ಅವರಿಗೆ ಈ ಪ್ರಕರಣದ ಬಗ್ಗೆ ಯಾವುದೇ ಕಾಳಜಿಯೇ ಇಲ್ಲವೆಂದೆನಿಸುತ್ತೆ ಎಂದು ರಾಹುಲ್​ ಗಾಂಧಿ ಟ್ವೀಟಾಯಿಸಿದ್ದಾರೆ .
ಚೀನಾ ಪೀಪಲ್ಸ್ ಲಿಬರೇಶನ್ ಆರ್ಮಿಯು ಈಶಾನ್ಯ ರಾಜ್ಯದ ಲುಂಗ್ಟಾ ಜೋರ್ ಪ್ರದೇಶದಿಂದ ಬಾಲಕನನ್ನು ಅಪಹರಿಸಿದೆ ಎಂದು ಸಂಸದ ತಪಿರ್ ಗಾವೊ ಆರೋಪಿಸಿದ ಒಂದು ದಿನದ ನಂತರ ರಾಹುಲ್​ ಗಾಂಧಿ ಈ ಪ್ರತಿಕ್ರಿಯೆ ನೀಡಿದ್ದಾರೆ.