ದಸರಾಗೆ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ ಅರಮನೆ ನಗರಿ
ಮೈಸೂರು
ನಾಡಹಬ್ಬ ವಿಶ್ವವಿಖ್ಯಾತ ದಸರಾ ಮಹೋತ್ಸವದ ಉದ್ಘಾಟನೆಗೆ ಕೆಲವೇ ದಿನ ಬಾಕಿ ಇದ್ದು, ಈ ಬಾರಿಯ ದಸರಾ ಮಹೋತ್ಸವವನ್ನು ಸರ್ಕಾರ ಸರಳವಾಗಿ ಆಚರಿಸಲು ನಿರ್ಧರಿಸಿರುವುದರಿಂದ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇತ್ತ ಅರಮನೆಯಲ್ಲೂ ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು, ಇಡೀ ಮೈಸೂರು ನವವಧುವಿನಂತೆ ಸಿಂಗಾರಗೊಳ್ಳುತ್ತಿದೆ. ಪ್ರಮುಖ ಸ್ಥಳಗಳು ಸೇರಿದಂತೆ ಇತರೆಡೆ ಅಳವಡಿಸಿರುವ ದೀಪಾಲಂಕಾರ ಜನರ ಕಣ್ಮನ ಸೆಳೆಯುತ್ತಿದೆ. ಆವರಣದಲ್ಲಿನ ಹೂಗಳು ಅರಮನೆಯ ಸೊಬಗನ್ನು ಮತ್ತಷ್ಟೂ ಹೆಚ್ಚಿಸಿವೆ ನಗರಕ್ಕೆ ಕಾಡಿನಿಂದ ಈಗಾಗಲೇ ಆಗಮಿಸಿರುವ ಗಜಪಡೆ ಅರಮನೆ ಅಂಗಳದಲ್ಲಿ ಬೀಡು ಬಿಟ್ಟಿವೆ. ದಸರಾ ಸಂದರ್ಭದಲ್ಲಿ ರಾತ್ರಿ 7ರಿಂದ 9 ಗಂಟೆವರೆಗೆ 2 ಗಂಟೆಗಳ ದೀಪಾಲಂಕಾರವಿರಲಿದೆ. ಅರಮನೆ ಹಾಗೂ ಕಾಂಪೌಂಡ್‍ಗೆ 1 ಲಕ್ಷ ಬಲ್ಬ್ ಅಳವಡಿಸಿದ್ದು, ಪ್ರತಿಬಾರಿಯೂ ಅರಮನೆಗೆ ಅಳವಡಿಸಿರುವ ಬಲ್ಬ್ ಗಳಲ್ಲಿ ಶೇ.10ರಷ್ಟು ಬಲ್ಬ್ ಗಳನ್ನು ಬದಲಿಸಲಾಗುತ್ತಿದೆ. ಅಲ್ಲದೇ ನಗರದ ಪ್ರಮುಖ ವೃತ್ತಗಳಲ್ಲಿಯೂ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸುವ ,ಇಳಿ ಬಿಡುವ ಕಾರ್ಯ ಭರದಿಂದ ಸಾಗಿದೆ.