ಸುಮಲತಾ vs ನಿಖಿಲ್ ಟಾಕ್ ಫೈಟ್; ಯುವರಾಜನ ಮಾತಿಗೆ ಕೌಂಟರ್ ಕೊಟ್ಟ ಲೇಡಿ ರೆಬೆಲ್
ಮಂಡ್ಯ: 2024ರ ಲೋಕಸಭಾ ಎಲೆಕ್ಷನ್ಗೆ ಸಂಸದೆ ಸುಮಲತಾ ಮಂಡ್ಯ ಬಿಟ್ಟು ಬೆಂಗಳೂರಲ್ಲಿ ಸ್ಪರ್ಧೆ ಮಾಡ್ತಾರೆ ಎಂದಿದ್ದ ನಿಖಿಲ್ ಕುಮಾರಸ್ವಾಮಿಗೆ ಸುಮಲತಾ ತಿರುಗೇಟು ಕೊಟ್ಟಿದ್ದಾರೆ. ಮಂಡ್ಯದಲ್ಲಿ ಸ್ಪರ್ಧೆ ಮಾಡ್ತಿನಿ ಅಂತೇಳಿ ಈಗ ರಾಮನಗರಕ್ಕೆ ಹೋಗಿರುವವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾರು ಹೊಂದಾಣಿಕೆ ಮಾಡಿಕೊಂಡ್ರು ಅನ್ನೋದು ಗೊತ್ತಿದೆ. ನಾನು ಯಾವುದೇ ಕಾರಣಕ್ಕೂ ಮಂಡ್ಯ ಬಿಟ್ಟು ಹೋಗಲ್ಲ. ನಿಖಿಲ್ ಹೇಳಿಕೆ ಅಪ್ರಬುದ್ಧವಾಗಿದೆ. ಅವ್ರು ನಾ ಹೇಳಿರೋದನ್ನ ಸರಿಯಾಗಿ ಕೇಳಿಸಿಕೊಂಡಿಲ್ಲ. ಇಲ್ಲಿ ಏನ್ ನಡೆಯುತ್ತಿದೆ ಎಂದೇ ಗೊತ್ತಿಲ್ಲ. ಮೊದಲು ಮಂಡ್ಯದಿಂದ ಸ್ಪರ್ಧಿಸಲಿ, ಆಮೇಲೆ ಕ್ಷೇತ್ರದ ಬಗ್ಗೆ ಮಾತನಾಡಲಿ ಎಂದು ಸಂಸದೆ ಸವಾಲು ಹಾಕಿದ್ರು.
ಇದೇ ವೇಳೆ ನಿಖಿಲ್ ಕುಟುಂಬದ ರಾಜಕಾರಣವನ್ನ ಟೀಕಿಸಿದ ಸುಮಲತಾ, ಇವ್ರು ನನ್ನ ಕ್ಷೇತ್ರದ ಬಗ್ಗೆ ಮಾತನಾಡ್ತಾರೆ. ಆದ್ರೆ ಅವರ ತಂದೆ, ತಾಯಿ ಸೇರಿ ಕುಟುಂಬವೇ ಎಷ್ಟೇಷ್ಟೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ ಎಂದು ಲಿಸ್ಟ್ ಇಡ್ಕೊಂಡು ಮಾತನಾಡಲಿ. ಜೆಡಿಎಸ್ನವ್ರು ಹೇಳೊದೊಂದು ಮಾಡೋದೊಂದು ಅಂತಾ ಜೆಡಿಎಸ್ ವಿರುದ್ಧ ರೆಬಲ್ ಲೇಡಿ ಕಿಡಿ ಕಿಡಿಯಾದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ