ಹಿರಿಯ ರಾಜಕಾರಣಿ, ಕೊಡುಗೈ ದಾನಿ 'ಟಿ. ಜಾನ್' ಇನ್ನಿಲ್ಲ

ಹಿರಿಯ ರಾಜಕಾರಣಿ, ಕೊಡುಗೈ ದಾನಿ 'ಟಿ. ಜಾನ್' ಇನ್ನಿಲ್ಲ

ಬೆಂಗಳೂರು : ಹಿರಿಯ ರಾಜಕಾರಣಿ ಟಿ. ಜಾನ್ (92) ಬೆಂಗಳೂರಿನ ತಮ್ಮ ನಿವಾಸದಲ್ಲಿ ಇಂದು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೇರಳ ಮೂಲದ ಟಿ.ಜಾನ್ ಕೊಡುಗೈ ದಾನಿ ಎಂದೇ ಖ್ಯಾತರಾಗಿದ್ದರು. ಟಿ ಜಾನ್ ಅವರು ಕಷ್ಟದಲ್ಲಿರುವ ಸಹಾಯ ಮಾಡುವ ಮೂಲಕ ಅಪಾರ ಜನಮನ್ನಣೆಗಳಿಸಿದ್ದರು.

ಎಸ್ ಎಂ ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದರು. ಅಬಕಾರಿ ಉದ್ಯಮದ ಮೂಲಕ ಹೆಸರು ಪ್ರಸಿದ್ದಿ ಪಡೆದಿದ್ದರು.

ಶಿಕ್ಷಣ ಸಂಸ್ಥೆಗಳು. ರೆಸಾರ್ಟ್ ಗಳನ್ನೂ ಆರಂಭಿಸಿ ಜನರ ಸೇವೆ ಮಾಡಿದ್ದ ಜಾನ್ ಇಂದು ವಿಧಿವಶರಾಗಿದ್ದಾರೆ. ನಾಳೆ ಶನಿವಾರ ಬೆಂಗಳೂರಿನಲ್ಲಿ ಟಿ.ಜಾನ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿದೆ.