ರಾಜ್ಯದ ಜನತೆ ಬಿಗ್‌ ಶಾಕ್‌ : ಫೆಬ್ರುವರಿ ತಿಂಗಳಲ್ಲೇ 'ಬೆಂಗಳೂರು, ಕರ್ನಾಟಕದಲ್ಲಿ ತಾಪಮಾನ ಭಾರೀ ಏರಿಕೆ'

ರಾಜ್ಯದ ಜನತೆ ಬಿಗ್‌ ಶಾಕ್‌ : ಫೆಬ್ರುವರಿ ತಿಂಗಳಲ್ಲೇ 'ಬೆಂಗಳೂರು, ಕರ್ನಾಟಕದಲ್ಲಿ ತಾಪಮಾನ ಭಾರೀ ಏರಿಕೆ'

ರೆಬೆಂಗಳೂರು : ರಾಜ್ಯದ ಜನರಿಗೆ ಬಿಗ್‌ ಶಾಕಿಂಗ್‌ ಎದುರಾಗಿದ್ದು, ಫೆಬ್ರುವರಿ ಮೊದಲ ವಾರದಲ್ಲಿಯೇ ಬೆಂಗಳೂರು, ಕರ್ನಾಟಕದಲ್ಲಿ ತಾಪಮಾನ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ತಜ್ಞರು ಎಚ್ಚರಿಕೆ ನೀಡಿದ್ದಾರೆ .

ಜನವರಿ ಕೊನೆಯ ವಾರದಲ್ಲಿ, ರಾಜ್ಯದಲ್ಲಿ ಸರಾಸರಿ ಗರಿಷ್ಠ ತಾಪಮಾನವು 27-28 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು, ಅದು ಈಗ ದಾಖಲಾದ 31 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ.

ಕೆಲವು ದಿನಗಳ ಹಿಂದೆ ಉತ್ತರ ಭಾರತದಲ್ಲಿ ಶೀತದ ಅಲೆ ಇತ್ತು, ಅದರ ಪರಿಣಾಮ ಕರ್ನಾಟಕ ಸೇರಿದಂತೆ ದಕ್ಷಿಣದಲ್ಲಿಯೂ ವಿಪರೀತ ಚಳಿಗೆ ಕಾರಣವಾಯಿತು. ಇದಲ್ಲದೆ, ಶ್ರೀಲಂಕಾದಲ್ಲಿನ ತಾಪನವೂ ಕೂಡ ಈಗ ಬಿಸಿಯಾಗಲು ಕಾರಣವಾಗಿದೆ, ಬಳಿಕ ಸ್ವಲ್ಪ ಮಟ್ಟಿಗೆ ತಾಪಮಾನ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಮಾಹಿತಿ ನೀಡಿದ್ದಾರೆ.

ಕರ್ನಾಟಕವು ಮುಂಗಾರು ಅವಧಿಯಲ್ಲಿ 839 ಮಿಮೀ ವಾಡಿಕೆಯ ಮಳೆಯು 1,009 ಮಿಮೀ ಸುರಿದಿದೆ. ಇದರಿಂದಾಗಿ ಹೆಚ್ಚಿನ ಮಣ್ಣಿನ ತೇವಾಂಶವನ್ನು ಅಧಿಕವಾಗಿರಿಸುತ್ತದೆ. ಈ ಬಾರಿಯ ಮುಂಗಾರು ಮಳೆಯಿಂದ ಜಲಾಶಯಗಳಲ್ಲಿ ಸಾಕಷ್ಟು ನೀರಿದೆ. ಈ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆ ಎದುರಾಗಲು ಸಾಧ್ಯತೆಯಿಲ್ಲ, ವಿದ್ಯುತ್‌ ಉತ್ಪಾದನೆಗೂ ತೊಂದರೆಯಾಗುವುದಿಲ್ಲ ಎಂದು ವರದಿಯಾಗಿದೆ.

ರಾಜ್ಯದ ಹಲವೆಡೆ ಈಗಾಗಲೇ ತಾಪಮಾನ ಹೆಚ್ಚಾಗಲಾರಂಭಿಸಿದ್ದು, ಫೆಬ್ರವರಿ 15ರ ವೇಳೆಗೆ ತಾಪಮಾನದಲ್ಲಿ ಮತ್ತಷ್ಟು ಏರಿಕೆಯಾಗಲಿದೆ.ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಮತ್ತು IMD ಯ ತಜ್ಞರು ಮಾಹಿತಿ ನೀಡಿದ್ದಾರೆ.