ನಾವು ಪೊಲೀಸ್‌ ಎಂದು ಹೇಳಿಕೊಂಡು ಚಿನ್ನದ ಬಿಸ್ಕತ್​​ ದರೋಡೆ ಮಾಡಿದ ಗ್ಯಾಂಗ್‌

ನಾವು ಪೊಲೀಸ್‌ ಎಂದು ಹೇಳಿಕೊಂಡು ಚಿನ್ನದ ಬಿಸ್ಕತ್​​ ದರೋಡೆ ಮಾಡಿದ ಗ್ಯಾಂಗ್‌

ಬೆಂಗಳೂರು: ನಗರದಲ್ಲಿ ಪೊಲೀಸರು ಎಂದು ಹೇಳಿಕೊಂಡು ರಸ್ತೆಗೆ ಇಳಿದಿದ್ದ ಖದೀಮರು ಚಿನ್ನದ ವ್ಯಾಪಾರಿಯಿಂದ ಸುಮಾರು 6 ಲಕ್ಷ ನಗದು, ಚಿನ್ನದ ಬಿಸ್ಕತ್​​ ದರೋಡೆ ಮಾಡಿರುವ ಘಟನೆ ನಡೆದಿದೆ.

ನಕಲಿ ಪೊಲೀಸರು ಕೈ ಚಳಕ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.ಫೆಬ್ರವರಿ 7ರಂದು ಪೊಲೀಸರ ವೇಶದಲ್ಲಿ ಬಂದ ಮೂವರು ಖದೀಮರು ಚಿನ್ನದ ವ್ಯಾಪಾರಿ ಉಪೇಂದ್ರನಾಥ್ ಎಂಬುವವರ ಬಳಿ ಕೆಲಸ ಮಾಡುತ್ತಿದ್ದ ಸುರೇಂದ್ರ ಎಂಬುವವರ ಬಳಿ ಇದ್ದ ಹಣ, ಚಿನ್ನ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಸುರೇಂದ್ರರಿಗೆ ನಾವು ಪೊಲೀಸ್‌ ಎಂದು ಪರಿಚಯ ಮಾಡಿಕೊಂಡಿದ್ದರು.

ಸ್ಯಾಟಲೈಟ್​​ ನಿಲ್ದಾಣದಲ್ಲಿ ತಮಿಳುನಾಡು ಬಸ್​​ಗೆ ಕಾದು ಕುಳಿತಿದ್ದರು. ಈ ವೇಳೆ ಪೊಲೀಸರು ಅಂತಾ ಹೇಳಿಕೊಂಡು ಬ್ಯಾಗ್ ಪರಿಶೀಲಿಸಬೇಕು ಎಂದು ಬಸ್ ನಿಂದ ಇಳಿಸಿದ್ದಾರೆ. ಬಳಿಕ ಬಿಳಿಕಾರ್ ನಲ್ಲಿ ಕೊಂಚ ದೂರ ಕರೆದೊಯ್ದು ಬ್ಯಾಗ್ ನಲ್ಲಿದ್ದ ಚಿನ್ನದ ಬಿಸ್ಕೆಟ್ ಹಾಗೂ 6 ಲಕ್ಷ ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.