ಸ್ಯಾಂಟ್ರೋ ರವಿ ವಿಚಾರವಾಗಿ ಹೆಚ್‌ಡಿಕೆ ನನ್ನ ಮೇಲೆ ತೇಜೋವಧೆಗೆ ಮುಂದಾಗಿದ್ದಾರೆ : ಆರಗ ಜ್ಞಾನೇಂದ್ರ ಕಿಡಿ

ಸ್ಯಾಂಟ್ರೋ ರವಿ ವಿಚಾರವಾಗಿ ಹೆಚ್‌ಡಿಕೆ ನನ್ನ ಮೇಲೆ ತೇಜೋವಧೆಗೆ ಮುಂದಾಗಿದ್ದಾರೆ : ಆರಗ ಜ್ಞಾನೇಂದ್ರ ಕಿಡಿ

ಬೆಂಗಳೂರು : ರಾಜ್ಯದಲ್ಲಿ ತೀವ್ರ ಸುದ್ದಿಗೆ ಗ್ರಾಸವಾಗಿರುವ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್ ಪ್ರಕರಣ ತಾರಕಕ್ಕೇರಿರುವಂತೆಯೇ ಇತ್ತ ಈ ಕುರಿತು ಪ್ರತಿಕ್ರಿಯಿಸಿದ, ಮಾಜಿ ಹೆಚ್‌.ಡಿ. ಕುಮಾರಸ್ವಾಮಿ ʻ ಗೃಹ ಸಚಿವರ ಮನೆಯಲ್ಲೇ ಸ್ಯಾಂಟ್ರೋ ರವಿ ಕಂತೆ ಹಣ ಎಣಿಕೆ ಮಾಡಿದ ಫೋಟೊ ವೈರಲ್‌ ʼಆಗಿದೆ ಎಂಬ ಆರೋಪಕ್ಕೆ ಗೃಹ ಸಚಿವ ಆಗರ ಜ್ಞಾನೇಂದ್ರ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಸ್ಯಾಂಟ್ರೋ ರವಿ ಪ್ರಕರಣ ಸಂಬಂಧ ಹೆಚ್‌ಡಿಕೆ ನನ್ನ ಮೇಲೆ ತೇಜೋವಧೆ ಮಾಡೋದಕ್ಕೆ ಮುಂದಾಗಿದ್ದಾರೆ. ಇದ್ರರಿಂದ ಕುಮಾರಸ್ವಾಮಿಗೆ ಯಾವ ರೀತಿಯ ಲಾಭವಾಗಲಿದೆ ಎಂದು ಗೊತ್ತಿಲ್ಲ.

ಸ್ಯಾಂಟ್ರೋ ರವಿ ಕಂತೆ ಹಣವನ್ನು ನಮ್ಮ ಮನೆಯಲ್ಲಿ ಎಣಿಕೆ ಮಾಡಿದ್ದಾನೆ ಎಂದು ಗಂಭೀರವಾದ ಆರೋಪ ಮಾಡಿದ್ದು ತಪ್ಪು, ಗೃಹ ಸಚಿವನಾದ ಕಾರಣಕ್ಕೆ ನನ್ನನ್ನು ದಿನ ನೂರಾರು ಜನರು ಭೇಟಿ ನೀಡುತ್ತಾರೆ. ಯಾರನ್ನೂ ಸೋಸಿ ನೋಡೊದಕ್ಕೆ ಆಗೋದಿಲ್ಲ ಟ್ರೋ ರವಿ ಅಲಿಯಾಸ್ ಮಂಜುನಾಥ್ ಪ್ರಕರಣವನ್ನು ಕೂಡಲೇ ತನಿಖೆ ನಡೆಸಲು ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಆಗರ ಜ್ಞಾನೇಂದ್ರ ತಿಳಿಸಿದ್ದಾ