ಲ್ಯಾಪ್ಟಾಪ್ಗಾಗಿ ವಿದ್ಯಾರ್ಥಿಗಳು ಪ್ರತಿಭಟನೆ | Dharwad |
ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು, ಸರ್ಕಾರದಿಂದ ಬರುವ ಲ್ಯಾಪ್ಟಾಪ್ಗಳನ್ನು ಪ್ರತಿಭಟನೆ ನಡೆಸಿಯೇ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಪ್ರತಿವರ್ಷವೂ ನಡೆಯುತ್ತಿದೆ. ಹೌದು ಪ್ರತಿ ಬಾರಿಯೂ ವಿದ್ಯಾರ್ಥಿಗಳು ಲ್ಯಾಪ್ಟಾಪ್ಗಾಗಿ ಪ್ರತಿಭಟನೆ ನಡೆಸುತ್ತಲೇ ಬರ್ತಿದ್ದಾರೆ. ಸ್ನಾತಕೋತ್ತರ ವಿಭಾಗದ ಪ್ರಥಮ ಹಾಗೂ ಅಂತಿಮ ವರ್ಷದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ಲ್ಯಾಪ್ಟಾಪ್ಗಾಗಿ ಕವಿವಿಯ ಕುಲಪತಿಗಳ ಕಚೇರಿ ಪ್ರತಿಭಟನೆ ನಡೆಸಿದ್ರು. ಇನ್ನು ವಿದ್ಯಾರ್ಥಿಗಳ ಪರವಾಗಿ ಹಿರಿಯ ವಕೀಲ ಪಿ ಎಚ್ ನೀರಲಕೇರಿ ಅವರು ಮಾತನಾಡಿ, ಈ ವಿಶ್ವ ವಿದ್ಯಾಲಯದಲ್ಲಿ ಓದುತ್ತಿರುವ ಎಸಿ, ಎಸ್ ಟಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿ ಸೌಲಭ್ಯ ನೀಡಬೇಕು. ಅಲ್ಲದೇ ಲ್ಯಾಪ್ಟಾಪ್ ಇವಾಗ್ ಅವಶ್ಯಕತೆ ಅವರಿಗೆ ಅದಷ್ಟು ಬೇಗ ಪೂರೈಕೆ ಮಾಡಬೇಕು. ಈಗಾಗಲೇ ಕುಲಪತಿಗಳು ಮಾಡಬೇಕಿರುವ ಕೆಲಸ ಮಾಡಿದ್ದಾರೆ,ಆದ್ರೆ ಸರ್ಕಾರದಿಂದ ಮಾತ್ರ ಈ ಕೆಲಸ ಡೀಲ್ಯಾ ಆಗ್ತಿದೆ. ಇದಕ್ಕೆ ಸಂಬಂಧ ಪಟ್ಟ ಸಚಿವರು ಈ ವಿದ್ಯಾರ್ಥಿಗಳ ಬೇಗಾ ಬಗಿಹರಿಸಬೇಕು ಎಂದರು. ಇನ್ನು ವಿದ್ಯಾರ್ಥಿ ರಮೇಶ ಮಾತನಾಡಿ ಆಹಾರ ಭತ್ಯೆಯನ್ನು 2 ಸಾವಿರದಿಂದ 3 ಸಾವಿರಕ್ಕೆ ಹೆಚ್ಚಿಸಬೇಕು, ಕಿರು ಪ್ರಬಂಧ ರಚನೆಗೆ ನೀಡಬೇಕಾಗಿರುವ ಭತ್ಯೆಯನ್ನು ಕೂಡಲೇ ನೀಡಬೇಕು ಹಾಗೂ ಕೊರೊನಾ ಲಾಕ್ಡೌನ್ ಕಾಲದಲ್ಲಿ ತಡೆಹಿಡಿದ ಆಹಾರ ಭತ್ಯೆಯನ್ನು ಬಿಡುಗಡೆಗೊಳಿಸಬೇಕು ಒತ್ತಾಯಿಸಿದರು ಕುಲಪತಿ ಪ್ರೊ.ಗುಡಸಿ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ,ಮಾತನಾಡಿ ಈ ವಿದ್ಯಾರ್ಥಿಗಳ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸುವುದಾಗಿ ಭರವಸೆ ನೀಡಿದ್ರು