ಇಂಡಿಯಲ್ಲಿ ಯಮಸ್ವರೂಪಿ ರಸ್ತೆಗಳು |Vijayapur|

ನಿಂಬೆನಾಡು ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ವಾಹನ ಸವಾರರಿಗೆ ಕಾದಿದೆ ಅಪಾಯದ ಎಚ್ಚರಿಕೆ. ತಾಲೂಕಾದ್ಯಂತ ಹದಗೆಟ್ಟಿರುವ ರಸ್ತೆಯಿಂದಾಗಿ ವಾಹನ ಸವಾರರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾವು ಪರಿಸ್ಥಿತಿ ನಿರ್ಮಾಣವಾಗಿದೆ. ಭವಿಷ್ಯದ ಜಿಲ್ಲಾ ಕೇಂದ್ರವೆಂದೆ ಬಿಂಬಿತಗೊಂಡಿರುವ ಇಂಡಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ತೆಗ್ಗು ಗುಂಡಿಗಳು ನಿರ್ಮಾಣ ವಾಗಿವೆ. ಇದನ್ನು ಕಂಡ ವಾಹನ ಸವಾರರಿಗೆ ಸದಾ ಅಪಾಯದ ಶಂಕೆ ಮೂಡುತ್ತದೆ. ಕಳೆದ ಎರಡು ದಿನಗಳಿಂದ ಅಲ್ಪ ಪ್ರಮಾಣದ ಮಳೆಯಾಗಿದ್ದರಿಂದ ರಸ್ತೆಯಲ್ಲಿರುವ ತೆಗ್ಗು, ಗುಂಡಿಗಳು ನೀರಿನಿಂದ ತುಂಬಿಕೊಂಡಿವೆ. ಇಂಡಿ ನಗರದ ಬಸವೇಶ್ವರ ವೃತ್ತ ಮಾರ್ಗದಿಂದ ರೈಲ್ವೆ ಸ್ಟೇಷನ್ ಹೋಗುವ ಮಾರ್ಗ ಸುಮಾರು ೩ ಕಿ.ಮೀ ವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹಾಳಾಗಿ ಹೋಗಿದೆ. ಸ್ಥಳೀಯವಾಗಿ ಕೈ ಪಕ್ಷ ಆಡಳಿತದಲ್ಲಿದ್ದರೆ.ರಾಜ್ಯದಲ್ಲಿ ಕಮಲ ಪಕ್ಷ ಆಡಳಿತ ಮಾಡುತ್ತಿದೆ. ಇವರಿಬ್ಬರ ಜಗಳದಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಲೋಕೋಪಯೋಗಿ