ಮರಗಳ ಮಾರಣ ಹೋಮ ತಡೆದ ವಿದ್ಯಾರ್ಥಿಗಳು | Bangalore |
ಪರಿಸರ ಬೆಳೆಸಿ ನಾಡು ಉಳಿಸಿ ಎಂದು ಘೋಷಣೆ ಕೂಗಿದ ಅಬ್ಬಿಗೆರೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಮರಗಳ ಮಾರಣಹೋಮಕ್ಕೆ ತಡೆಯೊಡ್ಡಿದ್ದಾರೆ. ರಸ್ತೆ ಅಗಲು ಮಾಡುವ ನೆಪದಲ್ಲಿ ನಲವತ್ತು ಮರಗಳ ಹೋಮ ಮಾಡಲು ಬಿಬಿಎಂಪಿ ಮುಂದಾಗಿದೆ. ಈ ವಿಚಾರ ತಿಳಿದ ಶಾಲೆಯ ನುರಾರು ವಿದ್ಯಾರ್ಥಿಗಳು ಮರದ ಕೆಳಗೆ ನಿಂತು ಮರ ಉಳಿಸಿ, ಶಾಲೆ ಉಳಿಸಿ ಎಂದು ಘೋಷಣೆ ಕೂಗುವ ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ ಮರಗಳನ್ನು ಕಡಿಯದಂತೆ ನಿರ್ಬಂಧ ಹೇರಿದರು. ಈ ಮೂಲಕ ಮುಖ್ಯಮಂತ್ರಿಗಳಿಗೂ ಮನವಿ ಮಾಡಿದರು.