ಸಚಿವ ಶ್ರೀರಾಮುಲು ವಿರುದ್ದ ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ವಾಗ್ದಾಳಿ, ದೇವರಲ್ಲಿ ಪ್ರಮಾಣಕ್ಕೆ ಸವಾಲು
ಸಚಿವ ಶ್ರೀರಾಮುಲು ವಿರುದ್ದ ಚಿತ್ರದುರ್ಗದ ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಶ್ರೀರಾಮುಲು ಓರ್ವ ಅವಕಾಶವಾದಿ ರಾಜಕಾರಣಿ. ಉಪ ಮುಖ್ಯಮಂತ್ರಿಯಾಗುತ್ತೇನೆ. ಮೊಳಕಾಲ್ಮೂರು ಕ್ಷೇತ್ರವನ್ನು ಅಭಿವೃದ್ದಿ ಮಾಡುವುದಾಗಿ, ನಾಯಕ ಸಮುದಾಯದವರಿಗೆ ಶೇಕಡಾ 7.5ರಷ್ಟು ಮೀಸಲಾತಿ ದೊರಕಿಸಿಕೊಡುವುದಾಗಿ ಸುಳ್ಳು ಹೇಳಿ ಮತ ಗಿಟ್ಟಿಸಿಕೊಂಡರು. ಈಗ ತಮ್ಮದೇ ಬಿಜೆಪಿ ಸರ್ಕಾರವಿದ್ದರೂ ನಾಯಕ ಸಮುದಾಯದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ನನ್ನು ಅವಧಿಯಲ್ಲಿ ಆದ ಪ್ರಗತಿ ಕಾಮಗಾರಿಗಳನ್ನು ಉದ್ಘಾಟನೆ ಮಾಡು ನೀನು, ನಿನ್ನ ಅವಧಿಯಲ್ಲಿ ಕ್ಷೇತ್ರಕ್ಕೆ ಎಷ್ಟು ಅನುದಾನ ಮಂಜೂರು ಮಾಡಿಸಿರುವೆ ಎಂದು ಪ್ರಶ್ನಿಸಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಪಿ.ಎ.ಗಳ ಹಾವಳಿ ಹೆಚ್ಚಾಗಿದೆ. ಕ್ಷೇತ್ರದ ಶಾಸಕ ನೀನೋ, ನಿನ್ನ ಪಿ.ಎ.ಗಳೋ ಎಂದು ಗುಡುಗಿದ್ದಾರೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದಕ್ಕೆ ಶ್ರೀರಾಮುಲು ಪಿ.ಎ.ಗಳ ಮೂಲ ಕಾರಣ ಎಂದು ಅವರು ಆರೋಪಿಸಿದ್ದಾರೆ. ಇಂತಹ ಲಜ್ಜೆಗೆಟ್ಟ ರಾಜಕಾರಣ ಮಾಡುವ ಜನಪ್ರತಿನಿಧಿಗಳು ಇನ್ಯಾರು ಇಲ್ಲ. ಓರ್ವ ಮಂತ್ರಿ ತನ್ನ ಪಿ.ಎ.ಗಳಿಗೆ ಸರ್ವಾಧಿಕಾರಿ ನೀಡಿ ಹಣ ಕೊಳ್ಳೆ ಹೊಡೆಯಲು ಬಿಟ್ಟಿರುವೆಯಾ? ಎಂದು ಪ್ರಶ್ನೆ ಮಾಡಿದ್ದಾರೆ. ಭದ್ರ ಮೇಲ್ದಂಡೆ ಯೋಜೆನಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ಹರಿಸುವ ಯೋಜನೆಯನ್ನು ನಾನು ಶಾಸಕನಾಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಸರ್ಕಾರ ಮಂಜೂರು ಮಾಡಿತ್ತು. ಇದು ಶಾಸಕನಾಗಿದ್ದಾಗ ನಾನು ಹೋರಾಡಿದ್ದರ ಪ್ರತಿಫಲ. ಆದರೆ ನೀನು ಭದ್ರಾ ಮೇಲ್ದಂಡೆ ಯೋಜನೆ ತಂದಿರುವುದಾಗಿ ಸುಳ್ಳು ಹೇಳುತ್ತಿರುವೆ. ನೀನು ಯೋಜನೆ ತಂದಿದ್ದೇ ಆದಲ್ಲಿ ಇಲ್ಲಿನ ನುಂಕಪ್ಪನ ದೇವಸ್ಥಾನದಲ್ಲಿ ಪ್ರಮಾಣ ಮಾಡಿ ಹೇಳು ಬಾ ಎಂದು ಸಚಿವ ಶ್ರೀರಾಮುಲುಗೆ ತಿಪ್ಪೇಸ್ವಾಮಿ ಸವಾಲು ಹಾಕಿದ್ದಾರೆ. ಮೊಳಕಾಲ್ಮೂರನಲ್ಲಿ ಪತ್ರಿಕಾಗೋಷ್ಠಿಯಲ್ಲಿಂದು ಅವರು ಮಾತನಾಡುತ್ತಿದ್ದರು.