ಏರುತ್ತಲೇ ಇದೆ ಚಿನ್ನದ ಬೆಲೆ

ಏರುತ್ತಲೇ ಇದೆ ಚಿನ್ನದ ಬೆಲೆ
ಬೆಂಗಳೂರು: ಕೆಲವು ದಿನಗಳಿಂದ ಚಿನ್ನಾಭರಣದ ಬೆಲೆ ಏರುತ್ತಲೇ ಇದೆ. ಇಂದು ಸಹ ಆಭರಣದ ಬೆಲೆ ಕೊಂಚ ಏರಿಕೆ ಕಂಡಿದೆ.
ಬೆAಗಳೂರಿನಲ್ಲಿ ೨೨ ಕ್ಯಾರೆಟ್ ೧೦ ಗ್ರಾಂ ಚಿನ್ನದ ದರ ೪೪,೦೧೦ ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ ೧೦೦ ರೂಪಾಯಿ ಏರಿಕೆ ಕಂಡು ಬಂದಿದೆ. ಅದೇ ರೀತಿ ೨೪ ಕ್ಯಾರೆಟ್ ೧೦ ಗ್ರಾಂ ಚಿನ್ನಕ್ಕೆ ೪೮,೦೧೦ ರೂಪಾಯಿ ಹಾಗೂ ೧೦೦ ಗ್ರಾಂ ಚಿನ್ನ ೪,೮೦,೧೦೦ ರೂಪಾಯಿಗೆ ಏರಿಕೆ ಆಗಿದೆ.
ಚೆನ್ನೈನಲ್ಲಿ ೨೨ ಕ್ಯಾರೆಟ್ ೧೦ ಗ್ರಾಂ ಚಿನ್ನಕ್ಕೆ ೪೪,೩೬೦ ಏರಿಕೆ ಆಗಿದೆ. ದೈನಂದಿನ ದರ ಏರಿಕೆಯಲ್ಲಿ ೧೦೦ ರೂಪಾಯಿ ಏರಿಕೆ ಕಂಡಿದೆ. ಅದೇ ರೀತಿ ೨೪ ಕ್ಯಾರೆಟ್ ೧೦ ಗ್ರಾಂ ಚಿನ್ನದ ದರ ೪೮,೩೯೦ ರೂಪಾಯಿಗೆ ಏರಿಕೆಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ೧೦೦ ರೂಪಾಯಿ ಏರಿಕೆ ಕಂಡು ಬಂದಿದೆ. ಬೆಳ್ಳಿ ದರ ಸ್ಥಿರವಾಗಿದ್ದು ಕೆಜಿ ಬೆಳ್ಳಿಗೆ ೬೮,೨೦೦ ರೂಪಾಯಿ ಇದೆ.
ದೆಹಲಿಯಲ್ಲಿ ೨೨ ಕ್ಯಾರೆಟ್ ೧೦ ಗ್ರಾಂ ಚಿನ್ನದ ದರ ೪೬,೧೬೦ ರೂಪಾಯಿಗೆ ಏರಿಕೆಯಾಗಿದೆ. ೨೪ ಕ್ಯಾರೆಟ್ ೧೦ ಗ್ರಾಂ ಚಿನ್ನದ ದರ ೫೦,೩೬೦ ರೂಪಾಯಿಗೆ ಏರಿಕೆಯಾಗಿದೆ.