ಏ. 15 ರಿಂದ ಬಿಲ್ಡಿಂಗ್ ನಿರ್ಮಾಣ ದರ ಏರಿಕೆ

ಹುಬ್ಬಳ್ಳಿ : ಪ್ರಸ್ತುತವಾಗಿ ಬಿಲ್ಡಿಂಗ್ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದಾಗಿ ಬಿಲ್ಡರ್ಸ್ ಗಳು ದರ ಏರಿಕೆಯನ್ನು ಮಾಡದೇ ಬೇರೆ ಯಾವುದೇ ಆಯ್ಕೆ ಇರುವುದಿಲ್ಲ. ಆದ್ದರಿಂದ ನಿವೇಶನ ಹಾಗೂ ವಸತಿ ಅಪಾರ್ಟ್ಮೆಂಟ್ ಗಳ ಬೆಲೆ ಏರಿಕೆ ಏ 15 ರಿಂದ ಜಾರಿಯಾಗಲಿದೆ ಎಂದು ಹು-ಧಾ ದ ಕ್ರೇಡಾಯ್ ನ ಅಧ್ಯಕ್ಷರಾದ ಸಾಜೀದ್ ಫರಾಶ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೇಶನ ಮತ್ತು ವಸತಿ ಅಪಾರ್ಟ್ಮೆಂಟ್ ಖರೀದಿಸುವ ಗ್ರಾಹಕರಿಗೆ ಸುಮಾರು 2 ಲಕ್ಷದಿಂದ 10 ಲಕ್ಷದವರೆಗೆ ಹೆಚ್ಚಿನ ಹೊರೆಯಾಗಲಿದೆ. ಬಿಲ್ಡಿಂಗ್ ಕಚ್ಚಾವಸ್ತುಗಳ ಬೆಲೆ ಏರಿಕೆ ಅಸಹನೀಯವಾಗಿದ್ದು, ತೀವ್ರವಾಗಿ ಏರಿದ ಬಿಲ್ಡಿಂಗ್ ಕಚ್ಚಾವಸ್ತುಗಳ ಬೆಲೆಗಳು ಕಬ್ಬಿಣ ಮತ್ತು ಸಿಮೆಂಟ್ ಇದರಿಂದಾಗಿಯೇ ಕಟ್ಟಡ ಕಾಮಗಾರಿ ಉದ್ಯಮ ತೀವ್ರವಾಗಿ ತೀವ್ರವಾದ ತೊಂದರೆಯಲ್ಲಿದೆ ಎಂದರು.
ಮುಂದುವರೆದು ಮಾತನಾಡಿ ಕಬ್ಬಿಣ, ಸಿಮೆಂಟ್ ಇದ್ದರಿಂದ ಕಟ್ಟಡ ಕಾಮಗಾರಿ ಉದ್ಯಮ ತೀವ್ರ ಸಂಕಷ್ಟದಲ್ಲಿದ್ದು, ಹಾಗಾಗಿ ಎಪ್ರಿಲ್ 15 ರಿಂದ ಖಾಲಿ ನಿವೇಶನಗಳ ಬೆಲೆಯನ್ನು 200, ಮೂಲ ವಸತಿ ಅಪಾರ್ಟ್ಮೆಂಟ್ ಬೆಲೆಯನ್ನು ಸುಮಾರು 4000 ರಿಂದ 4500 ಚದರ ಅಡಿಗೆ ಬೆಲೆ ಏರಿಕೆ, ಸ್ಥಳದ ಮೇಲೆ ಅವಲಂಬಿತವಾಗಿದೆ. ಕೆಲವು ಕಡೆ ಭೂಮಿಯ ವೆಚ್ಚದ ಅನುಸಾರ ವಸತಿ ಅಪಾರ್ಟ್ಮೆಂಟ್ ಬೆಲೆ 6000 ಚದರ ಅಡಿಗೆ ಅನುಷ್ಠಾನಕ್ಕೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸುರೇಶ ಶೇಜವಾಡಕರ, ಸಂಜಯ ಕೊಠಾರಿ, ನಾರಾಯಣ ಹಬೀಬ್, ದಿಲೀಪ್, ಗುರುರಾಜ ಅಣ್ಣಿಗೇರಿ, ಸುರಜ್ ಅಲವಂಡಿ, ಡಿಸೋಜಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.