ಜೆಡಿಎಸ್ ನಿಂದ ಬಾಳೆ ಹಣ್ಣು ಭಾಗ್ಯ

ಜೆಡಿಎಸ್ ನಿಂದ ಬಾಳೆ ಹಣ್ಣು ಭಾಗ್ಯ

ತುಮಕೂರು: ಹೆಲ್ಮೆಟ್ ಆಯ್ತು, ಈಗ ಜೆಡಿಎಸ್ ಮುಖಂಡ ಆರ್. ಉಗ್ರೇಶ್ ಅವರು ಬಾಳೆ ಹಣ್ಣು ಭಾಗ್ಯ ಕರುಣಿಸಿದ್ದಾರೆ. ಹುಟ್ಟು ಹಬ್ಬದ ಪ್ರಯುಕ್ತ ಉಗ್ರೇಶ್ ಅವರು ಹಣ್ಣು ಹಂಪಲು ಹಂಚಿದ್ದಾರೆ. ಅಂತೆಯೇ ಹಣ್ಣು ಕೊಂಡೊಯ್ಯಲು ಜನ ಮುಗಿಬಿದ್ದಿದ್ದಾರೆ. ಸಿಕ್ಕಿದ್ದೇ ಸೀರುಂಡೆ ಎಂದು ಅಭಿಮಾನಿಗಳು ಬಾಳೆ ಗೊನೆಯನ್ನೇ ಹೊತ್ತೊಯ್ದ ಪ್ರಸಂಗ ನಡೆದಿದೆ.. ಶಿರಾ ನಗರದಲ್ಲಿ ರ‍್ಯಾಲಿ ನಡೆಸಿ, ಅಭಿಮಾನಿಗಳು ಉಗ್ರೇಶ್ ಅವರಿಗೆ ಜೆಸಿಬಿ ಮೂಲಕ ಪುಷ್ಪವೃಷ್ಠಿ ಮಾಡಿದರು.